ಗುಬ್ಬಿ: ಸ್ಥಳೀಯರಿಗೆ ಹಾಗೂ ಎಚ್ಎಎಲ್ ನಲ್ಲಿ ಕೆಲಸ ಮಾಡುವ ನೌಕರ ವರ್ಗದವರಿಗೆ ಅನುಕೂಲವಾಗಲೆಂದು ತುಮಕೂರಿನಿಂದ ಎಚ್ಎಎಲ್ ಕೈಗಾರಿಕ ವಲಯಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.
ತಾಲೂಕಿನ ಬಿದರೆ ಹಳ್ಳ ಕಾವಲ್ ನ ಎಚ್ಎಎಲ್ ಘಟಕ ಮುಂಭಾಗದಲ್ಲಿ ಸರ್ಕಾರಿ ಬಸ್ ಸೇವೆಗೆ ಹಸಿರು ನಿಶಾನೆ ತೋರಿ ಮಾತನಾಡಿ, ಎಚ್ಎಎಲ್ ಘಟಕದ ನಿರ್ಮಾಣದ ಗುದ್ದಲಿ ಪೂಜೆಗೆ ಪ್ರಧಾನಮಂತ್ರಿಯವರ ಜೊತೆ ಭಾಗಿ ಆಗಿದ್ದೆ ಈಗ ಅದರ ಸಿದ್ಧತೆ ಹೇಗಿದೆ ಎಂಬುದನ್ನು ಪರಿಶೀಲಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗೆ ಯಾರು ಮರುಳಾಗದೆ ಸರಕಾರದ ಎಂಪ್ಲಾಯ್ಮೆಂಟ್ ಕಚೇರಿಯಲ್ಲಿ ಅರ್ಜಿ ಆಹ್ವಾನಿಸಿದ ನಂತರವೇ ಎಚ್ಎಎಲ್ ಘಟಕದಲ್ಲಿ ಅರ್ಜಿ ಕರೆದಾಗ ತಾವು ಅಲ್ಲಿ ಹಾಕಬೇಕೆ ಹೊರತು ಬೇರೆ ಎಲ್ಲಿಯೂ ಸಹ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಮುರುಳಿಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್, ತಹಶೀಲ್ದಾರ್ ಬಿ.ಆರತಿ, ಇಓ ಪರಮೇಶ್ ಕುಮಾರ್, ಕೆಎಸ್ಆರ್ ಟಿಸಿ ಚಂದ್ರಶೇಖರ್, ಮುಖಂಡರಾದ ತಾತಯ್ಯ, ಫಣಿ, ಕುಂದರನಹಳ್ಳಿ ರವೀಶ್, ಶಶಿಧರ್, ಭಾಗ್ಯಮ್ಮ, ಈಶ್ವರಯ್ಯ, ಬಸವರಾಜು ನಾಯಕ್, ಶಿವಣ್ಣ, ಸಿದ್ದಲಿಂಗಯ್ಯ ಸೇರಿದಂತೆ ಎಚ್ಎಎಲ್ ಅಧಿಕಾರಿಗಳು ಇದ್ದರು.
Comments are closed.