ಪ್ರತಿ ಗೆಲುವೂ ಹೊಸ ಸಾಧನೆಗೆ ಮೊದಲ ಮೆಟ್ಟಿಲು: ಎನ್.ಬಿ.ಪ್ರದೀಪ್ ಕುಮಾರ್

88

Get real time updates directly on you device, subscribe now.


ತುಮಕೂರು: ಸಾಧನೆಗೆ ಕೊನೆಯ ಮೆಟ್ಟಿಲುಗಳೆಂಬುದಿಲ್ಲ. ಪ್ರತಿಯೊಂದು ಗೆಲವು ಕೂಡಾ ಮುಂದಿನ ಹಂತಕ್ಕೆ ಮೊದಲ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿ ಗಳಿಸಿಕೊಂಡ ಅಂಕಗಳು ನಮಗೆ ಸಾರ್ಥಕತೆಯ ಭಾವವನ್ನು ತಂದುಕೊಟ್ಟಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಹೇಳಿದರು.

ಜಿಲ್ಲಾ ಬಾಲಭವನದಲ್ಲಿ ವಿದ್ಯಾನಿಧಿ ಕಾಲೇಜು ವತಿಯಿಂದ ಆಯೋಜಿಸಲಾದ ನಮ್ಮ ವಿದ್ಯಾರ್ಥಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧಿಸಬೇಕೆಂಬ ಹಟಹೊಂದಿದ ವಿದ್ಯಾರ್ಥಿ ವೃಂದಕ್ಕೆ ಉಪನ್ಯಾಸಕರು ಸಮರ್ಥ ಮಾರ್ಗದರ್ಶಕರಾಗಿದ್ದಾಗ ಸಂಸ್ಥೆಯೊಂದು ಕಂಡ ಕನಸು ನನಸಾಗಬಲ್ಲುದು ಎಂಬುದಕ್ಕೆ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿರುವುದು ಸಾಕ್ಷಿ. ವೃತ್ತಿಯನ್ನು ಪ್ರವೃತ್ತಿಯನ್ನಾಗಿಯೂ ಸ್ವೀಕರಿಸಿದ ಉಪನ್ಯಾಸಕ ವರ್ಗವು ನಮ್ಮ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿಸುವಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಆಡಳಿತವರ್ಗದ ಕನಸುಗಳನ್ನು ತಮ್ಮದಾಗಿಸಿಕೊಂಡು ಸಾಧನೆಯ ಮತ್ತೊಂದು ಸ್ತರಕ್ಕೆ ನಾವು ತೆರೆದುಕೊಳ್ಳುವಂತೆ ಮಾಡಿದ ಎಲ್ಲರಿಗೂ ಆಭಾರಿಗಳಾಗಿದ್ದೇವೆ ಎಂದು ಪ್ರದೀಪ್ ಕುಮಾರ್ ಸರ್ವರನ್ನೂ ಅಭಿನಂದಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲರು, ಕೋವಿಡ್ ನಂತರದ ದಿನಗಳಲ್ಲಿ ಅತ್ಯಂತ ಒತ್ತಡವನ್ನು ಈ ವಿದ್ಯಾರ್ಥಿಗಳು ಅನುಭವಿಸಿದ್ದಾರೆ.ತಮ್ಮೆದುರಿಗಿದ್ದಎಲ್ಲ ಸವಾಲುಗಳನ್ನೂ ಅವಕಾಶಗಳನ್ನಾಗಿ ಮಾರ್ಪಡಿಸಿಕೊಂಡು ಬೆಳೆದಿದ್ದಾರೆ. ಸಂಪನ್ಮೂಲದ ಸದ್ಬಳಕೆಯಿಂದ ಏರುವಎತ್ತರವು ಹತ್ತಿರವಾಗುತ್ತದೆಇವರು ಮಾದರಿ.ಇವರಿಗೆ ಪೂರಕವಾಗಿ ಸ್ಪಂದಿಸುತ್ತಾ, ಕಾಲೇಜಿನ ಆಶಯಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳ ಪ್ರತಿಯೊಂದು ಹೆಜ್ಜೆಗೂ ಆಧಾರವಾಗಿ ಒದಗಿದಂತಹ ಪೋಷಕ ವೃಂದದ ಬೆಂಬಲ ನಮ್ಮನ್ನುಇನ್ನಷ್ಟು ಸಾಧನೆ ಕಡೆಗೆ ಪ್ರೇರೇಪಿಸುತ್ತಿದೆ ಎಂದರು.

2023ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದುಕೊಂಡ ಹದಿಮೂರು ಮಂದಿಯನ್ನು ಒಳಗೊಂಡಂತೆ, ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದ 402 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಉಪನ್ಯಾಸಕಿ ಹೇಮಲತಾ ಎಂ.ಎಸ್. ಪ್ರಾರ್ಥಿಸಿ, ಆಲ್ಪೋನ್ಸಾ ವಂದಿಸಿದರು. ನಂದಿನಿ, ಗಾಯತ್ರಿ, ಸಾಧನಾ, ಲಕ್ಷ್ಮೀ ಸನ್ಮಾನಿತ ಸಾಧಕರನ್ನು ವೇದಿಕೆಗೆ ಬರಮಾಡಿಕೊಂಡರು. ಆರತಿ ಪಟ್ರಮೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರದರ್ಶಿಸಿದರು.

Get real time updates directly on you device, subscribe now.

Comments are closed.

error: Content is protected !!