ತುಮಕೂರು: ನಗರದ ಜಿಲ್ಲಾಸ್ಪತ್ರೆಗೆ ಮ್ಯಾನ್ ಹೋಲ್ ವೆಲ್ ಕಂಪೆನಿ ವತಿಯಿಂದ 15 ಲಕ್ಷ ವೆಚ್ಚದ ಸಿಬಿಸಿ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಬಯೋ ಕೆಮಿಸ್ಟ್ರಿ ಯಂತ್ರದ ಕೊರತೆ ಇರುವುದನ್ನು ಮನಗಂಡ ಮ್ಯಾನ್ಹೋಲ್ ವೆಲ್ ಕಂಪೆನಿಯವರು ಆಸ್ಪತ್ರೆಯ ವೈದ್ಯರಿಂದ ಮನವಿ ಸ್ವೀಕರಿಸಿ, ಸಿಎಸ್ಆರ್ ಕಮಿಟಿಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡು 15 ಲಕ್ಷ ವೆಚ್ಚದ ಎ.ಎಂ.-36 ಬಯೋಕೆಮಿಸ್ಟ್ರಿ (ಸಿಬಿಸಿ) ಯಂತ್ರ ಹಸ್ತಾಂತರ ಮಾಡಿದ್ದಾರೆ.
ಜಿಲ್ಲಾಸ್ಪತ್ರೆಗೆ ಈ ಯಂತ್ರವನ್ನು ಹಸ್ತಾಂತರ ಮಾಡಿದ ಕಂಪೆನಿಯ ಪ್ಲಾಂಟ್ ವ್ಯವಸ್ಥಾಪಕ ಪ್ರಶಾಂತ್ ಗಾಯತುಂಡೆ ಮಾತನಾಡಿ, ಎಎಂ-36 ಬಯೋ ಕೆಮಿಸ್ಟ್ರಿ ಯಂತ್ರ ಆಸ್ಪತ್ರೆಗೆ ಬರುವ ಬಡ ರೋಗಿಗಳ ಪರೀಕ್ಷೆಗೆ ಉಪಯೋಗವಾಗಲಿದೆ ಪ್ರಸ್ತುತ 1.37 ಲಕ್ಷ ಪರೀಕ್ಷೆ ಮಾಡಲಾಗಿದೆ. ಇದರಿಂದ 34 ಸಾವಿರ ರೋಗಿಗಳಿಗೆ ಉಪಯೋಗವಾಗಿದೆ, ಬಯೋ ಕೆಮಿಸ್ಟ್ರಿ ಪರೀಕ್ಷೆಗೆ ಒಳಗಾಗುವ ರೋಗಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಮಾತನಾಡಿ, ಮ್ಯಾನ್ ಹೋಮ್ ವೆಲ್ ಕಂಪೆನಿಯ ಸಿಎಸ್ಆರ್ ಕಮಿಟಿ ವತಿಯಿಂದ 15 ಲಕ್ಷ ವೆಚ್ಚದ ಸಿಬಿಸಿ ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದ್ದಾರೆ. ಈ ಯಂತ್ರದ ಅವಶ್ಯಕತೆ ಜಿಲ್ಲಾಸ್ಪತ್ರೆಗೆ ಇತ್ತು. ಬಡ ರೋಗಿಗಳಿಗೆ ನಿತ್ಯದ ಬಯೋ ಕೆಮಿಸ್ಟ್ರಿ ಪರೀಕ್ಷೆಗೆ ಸಹಾಯವಾಗಿದೆ ಎಂದರು. ಜಿಲ್ಲಾಸ್ಪತ್ರೆಗೆ ಸಿಬಿಸಿ ಯಂತ್ರ ಕೊಡುಗೆಯಾಗಿ ನೀಡಿರುವ ಈ ಕಂಪೆನಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮ್ಯಾನ್ ಹೋಮ್ ವೆಲ್ ಕಂಪೆನಿಯ ಕಾಂತರಾಜು, ನವೀನ್, ಪ್ರಸನ್ನಕುಮಾರ್, ಜಿಲ್ಲಾಸ್ಪತ್ರೆ ವೈದ್ಯರು ಸಿಬ್ಬಂದಿ ಇದ್ದರು.
Comments are closed.