ಬೈಕ್ ಗೆ ಸರಕು ವಾಹನ ಡಿಕ್ಕಿ ಇಬ್ಬರು ಸಾವು

1,309

Get real time updates directly on you device, subscribe now.


ಪಾವಗಡ: ತಾಲ್ಲೂಕಿನ ಕಡಮಲಕುಂಟೆ ಗೇಟ್ ಬಳಿ ಬೈಕ್ ಹಾಗೂ ಸರಕು ಸಾಗಣೆ ವಾಹನಗಳ ನಡುವೆ ಶನಿವಾರ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಂಧ್ರದ ರೊದ್ದಂಮಂಡಲಂ ಚಿನ್ನಕೋಡಿಪಲ್ಲಿ ಗ್ರಾಮದ ಯಶ್ವಂತ್ (16), ಈಶ್ವರ್ (17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ರಾಮು ತೀವ್ರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಕಡೆಯಿಂದ ಕೊಡಮಡುಗು ಕಡೆಗೆ ಹೋಗುವಾಗ ಬೈಕ್ ಗೆ ಸರಕು ಸಾಗಣೆ ವಾಹನ ಡಿಕ್ಕಿಯಾಗಿದೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದರು.

Get real time updates directly on you device, subscribe now.

Comments are closed.

error: Content is protected !!