ಬೈಕ್ ಅಪಘಾತ: ಇಬ್ಬರು ಸಾವು

142

Get real time updates directly on you device, subscribe now.


ಕುಣಿಗಲ್: ತಾಲೂಕಿನ ವಿವಿದೆಡೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಯಡಿಯೂರು ದೇವಾಲಯ ದರ್ಶನ ಪೂರೈಸಿ ಬೈಕ್ ನಲ್ಲಿ ಪತಿ, ಪತ್ನಿ ಹಿಂತಿರುಗುವಾಗ ಯಡಿಯೂರ ಸಮೀಪ ಬೈಕ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನವೀನ ಪತ್ನಿ ಪ್ರಿಯಾಂಕ (23) ಮೃತಪಟ್ಟಿದ್ದಾರೆ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಹೊಸಳ್ಳಿ ಗ್ರಾಮದ ಬಳಿ ಹುಲಿಯೂರುದುರ್ಗ ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಬೈಕ್ ಸರಕು ಸಾಗಾಣೆ ವಾಹನ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ನಂಜುಂಡಯ್ಯ(42) ಮೃತಪಟ್ಟಿದ್ದಾರೆ.

Get real time updates directly on you device, subscribe now.

Comments are closed.

error: Content is protected !!