ಮಕ್ಕಳಿಗೆ ಪೋಷಕರೇ ಮಾದರಿಯಾಗಲಿ: ಕೆ.ಬಿ.ಜಯಣ್ಣ

134

Get real time updates directly on you device, subscribe now.


ತುಮಕೂರು: ವ್ಯಕ್ತಿಯೊಬ್ಬ ಅನುಭವಿಸುವ ಸಂತೋಷವು ಅವನ ಯಶಸ್ಸಿನ ದ್ಯೋತಕ, ಮಕ್ಕಳೆದುರು ದಂಪತಿ ಪರಸ್ಪರ ಗೌರವದಿಂದ ವರ್ತಿಸಿದರೆ ಮಕ್ಕಳ ಬದುಕಿನಲ್ಲಿ ಅನುಸರಿಸಲು ಬೇಕಾದ ಮಾದರಿ ಒದಗಿಸಿದಂತಾಗುತ್ತದೆ. ಮಕ್ಕಳು ನಾವು ಹೇಳಿದ್ದನ್ನು ಪಾಲಿಸದಿದ್ದರೂ ನಮ್ಮ ನಡೆ ನುಡಿಯನ್ನು ತಮಗರಿವಿಲ್ಲದೆ ಗ್ರಹಿಸಿಕೊಳ್ಳುತ್ತಾರೆ. ಹ್ಯಾಪಿ ಪೇರೆಂಟಿಂಗ್ ಕಾರ್ಯಕ್ರಮದ ಪ್ರಯೋಜನ ಪಡೆದ ಪೋಷಕರು ತಮ್ಮ ಮಕ್ಕಳ ಜೀವನವನ್ನು ದೃಢವಾಗಿ ರೂಪಿಸುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ ಕೆ.ಬಿ.ಜಯಣ್ಣ ಹೇಳಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗಾಗಿ ಏರ್ಪಡಿಸಲಾಗಿದ್ದ ಹ್ಯಾಪಿ ಪೇರೆಂಟಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಮಕ್ಕಳನ್ನು ಸ್ನೇಹಿತರಂತೆ ಕಾಣುವುದು ಉತ್ತಮ, ಪೋಷಕರಾಗಿರುವ ನಾವು ಅವರ ಅನಿಸಿಕೆ ಅಭಿಪ್ರಾಯ ಆಲಿಸಿಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ, ಈ ಹಿಂದೆ ನಾನು ಸಂಸ್ಥೆಯ ಕಾರ್ಯದರ್ಶಿಯಾಗಿ ಸಮಾರಂಭಗಳಲ್ಲಿ ಮಾತನಾಡುತ್ತಿದ್ದೆ, ಆದರೆ ಈಗ ನಾನು ಕೂಡಾ ಪೋಷಕನಾಗಿ ಮಾತನಾಡುತ್ತಿರುವೆ, ನಮ್ಮ ಬದುಕಿನಲ್ಲಿಎಷ್ಟೇ ಒತ್ತಡಗಳಿದ್ದರೂ ಮಕ್ಕಳಿಗೆ ಸಮಯ ಹಾಗೂ ಪ್ರೀತಿ ಕೊಟ್ಟು ಮಾತನಾಡಿಸುತ್ತಿದ್ದಲ್ಲಿ ಮಾತ್ರ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.

ಹ್ಯಾಪಿ ಪೇರಿಂಟಿಂಗ್ ಕಾರ್ಯಕ್ರಮದ ಮುಖ್ಯ ವಕ್ತಾರರಾದ ಕೈವಲ್ಯ ಅಕಾಡೆಮಿಯ ಡಾ.ಲೋಕೇಶ್ ಮಾತನಾಡಿ, ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು, ಹೆಣ್ಣು ಮತ್ತು ಗಂಡು ಎಂದು ತಾರತಮ್ಯತೆ ತೋರಬಾರದು, ಪೋಷಕರಾಗಿರುವ ನಾವು ಮಕ್ಕಳಿಗೆ ಅತ್ಯಾಪ್ತ ಒಲವು ತೋರಬೇಕು, ಮನೆಯಲ್ಲಿ ಮಕ್ಕಳನ್ನ ಸ್ನೇಹ ಮನೋಭಾವದಿಂದ ಕಾಣಬೇಕು. ಪ್ರೀತಿ, ಗೌರವ, ಹೊಂದಾಣಿಕೆ ಅಭಿವ್ಯಕ್ತಿ, ಸಂವಹನ ಮೊದಲಾವುಗಳು ಬದುಕಿನಲ್ಲಿ ಅತ್ಯಮೂಲ್ಯ ಸಂಗತಿ ಎಂದರು.

ಉಪ ಪ್ರಾಂಶುಪಾಲ ವೇದಮೂರ್ತಿ.ಎಚ್.ಎಸ್, ಉಪನ್ಯಾಸಕಿ ನಿಖಿತಾ, ವಿನಯ್.ಬಿ.ಇ, ಉಪನ್ಯಾಸಕಿ ಪೂರ್ಣಗಂಗಾ, ಆರತಿ ಪಟ್ರಮೆ, ವಿದ್ಯಾನಿಧಿ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಪೋಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!