ತುಮಕೂರು: ಅತ್ಯಂತ ಸಂಕಷ್ಟದ ಕೊರೊನಾ ಸಾಂಕ್ರಾಮಿಕ ಮಾರಿಯ ದಿನಗಳಲ್ಲೂ ಭಾರತ ವಿದೇಶ ನೇರ ಬಂಡವಾಳ ಹೂಡಿಕೆಗೆ ಉತ್ತಮ ತಾಣವಾಗಿ ಬೆಳವಣಿಗೆ ಕಂಡಿದ್ದು ಹೊರಗಿನ ಹೂಡಿಕೆದಾರರು ಭಾರತದ ಆರ್ಥಿಕ ಸ್ಥಿತಿಗತಿಯನ್ನು ಕೂಲಂಕಷವಾಗಿ ಅಂಕಿ ಅಂಶಗಳ ಮೂಲಕ ಪರಿಶೀಲಿಸಿಯೇ ನಿರ್ಧಾರ ಕೈಗೊಂಡಿರುತ್ತಾರೆ ಎಂದು ಮತ್ತು ಮುಂದಿನ ದಿನಗಳಲ್ಲಿ ತನ್ನೆಲ್ಲಾ ಇತಿಮಿತಿಗಳ ನಡುವೆಯೂ ದೇಶ ತನ್ನ ಅಂತಸತ್ವದಿಂದ ಸಬಲವಾದ ಆರ್ಥಿಕ ಮತ್ತು ಸೇನಾಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರ ಇಲಾಖೆಯ ಮಾಜಿ ಸಹಾಯಕ ನಿರ್ದೇಶಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ಕೇಶವ ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ವಿಭಾಗದ ವತಿಯಿಂದ ಆಯೋಜಿಸಿದ್ದ ಸ್ಟ್ಯಾಟಿಸ್ಟಿಕ್‌ಸ್ ಮ್ಯಾನೇಜ್‌ಮೆಂಟ್ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಿರ್ಧಾರ ಕೈಗೊಳ್ಳಬೇಕಾದಾಗ ಅಂಕಿ ಅಂಶಗಳ ಮೇಲೆಯೇ ಅವಲಂಬಿತರಾಗಿ ದೃಢವಾದ ಶ್ರದ್ಧೆಯಿಂದ ವಿಶ್ಲೇಷಣೆ ಮಾಡಿ ಹಿಂದಿನ ನ್ಯೂನತೆಗಾಗಿ ಬೆಳಕಿನಲ್ಲಿ ಮುಂದುವರೆದರೆ ಯಶಸ್ಸು, ಕೈಗಾರಿಕೆ, ವಾಣಿಜ್ಯ, ಆಡಳಿತ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕಟ್ಟಿಟ್ಟಬುತ್ತಿ ಎಂದರು.
ಯಾವುದೋ ಒಂದು ನಿರ್ದಿಷ್ಟ ಘಟನೆಯ ಮೇಲೆ ಎಂದು ಅವಲಂಬಿತರಾಗದೆ ತನ್ನ ಮಿತಿಯೊಳಗಡೆ ಯೋಚಿಸಿ ನಂತರ ಮಿತಿ ಬಂಧಗಳ ಮೀರಿ ಬದುಲಿಗೆ ಬಂದಲ್ಲಿ ಹಿನ್ನಡೆಗಳು ಎಂದೂ ಕಾಡವು ಎಂದು ಅಂಕಿ ಅಂಶಗಳೊಡನೆ ಮನ ಮುಟ್ಟುವಂತೆ ವಿವರಿಸಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಎಂಬಿಎ ಪದವೀ‘ರರು ಎಲ್ಲೆಡೆಯೂ ಹೆಚ್ಚಿನ ವೇತನದಾರರಾಗಿದ್ದಾರೆ ಹಾಗೂ ಹೆಚ್ಚಿನ ಮಟ್ಟಿಗೆ ಉದ್ಯಮಿಗಳಾಗಿ ದೇಶದ ಆರ್ಥಿಕ ಶಕ್ತಿಯ ಬೆನ್ನೆಲುಬಾಗಿದ್ದಾರೆ, ಅವರಿಗೆ ಎಲ್ಲಾ ನಿರ್ಧಾರಗಳನ್ನು ಸಮರ್ಥವಾಗಿ ಕೈಗೊಂಡು ಜಾರಿಗೆ ತರಲು ಸಂಖ್ಯಾಶಾಸ್ತ್ರದ ಅಂಕಿ ಅಂಶಗಳೇ ಆಧಾರವಾಗಿ ಭವಿಷ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದರು.
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಗುರುತರವಾದ ಹಿನ್ನಡೆಗೊಳಗಾಗಿ ಕುಸಿತ ಕಂಡಿರುವ ಈ ವರ್ಷದಲ್ಲಿ ಸರ್ಕಾರ ಅಂಕಿ ಅಂಶಗಳನ್ನು ಪರಿಶೀಲಿಸಿ ದೇಶದ ಒಟ್ಟು ದೇಶಿಯ ಉತ್ಪಾದನೆ ಉತ್ತಮಗೊಳಿಸಲು ರೂಪಿಸುತ್ತಿರುವ ಯೋಜನೆಗಳಿಗೆ ಮೂಲ ಮಾಹಿತಿ ಸಂಖ್ಯಾಶಾಸ್ತ್ರದಿಂದಲೇ ಲಭ್ಯವಾಗುತ್ತಿದೆ, ಎಂಬಿಎ ವಿದ್ಯಾರ್ಥಿಗಳು ಈ ತರಹದ ಕಾರ್ಯಾಗಾರಗಳಿಂದ ತಮ್ಮ ಬೌದ್ಧಿಕ ವಿಸ್ತರಣೆ ಮಾಡಿಕೊಳ್ಳಬೇಕೆಂದರು.
ಕೋವಿಡ್ ದೇಶದ ಪ್ರಗತಿಗೆ ಮಾರಕವಿರುವುದರಿಂದ ಆರ್ಥಿಕ ಹಿನ್ನಡೆಗೆ ನೇರವಾಗಿ ಕಾರಣವಾಗುತ್ತಿರುವುದರಿಂದ ಎಲ್ಲರೂ ತಪ್ಪದೆ ಮಾಸ್‌ಕ್ ‘ರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ದೇಶದ ಪ್ರಗತಿಗೆ ಪೂರಕವಾಗಿ ಬೆಂಬಲಿಸುವುದು ಹಾಗೂ ವೈಯಕ್ತಿಕ ಸ್ವಾಸ್ಥ್ಯದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಕರ್ತವ್ಯ ಎಂದರು.
ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸಂಖ್ಯಾಶಾಸ್ತ್ರದ ಅಂಕಿ ಅಂಶಗಳ ಮೂಲ ನಿಯಮಗಳಿಗೂ ಅವಿನಾಭಾವ ಸಂಬಂಧವಿದೆಯೆನ್ನುವುದನ್ನು ವಿವರಿಸಿ ಕ್ರೀಡೆ, ಕಲೆ, ವಿಜ್ಞಾನ ಸಂಖ್ಯಾಶಾಸ್ತ್ರದ ನೆರವಿನಿಂದ ಸತತ ಅಭಿವೃದ್ಧಿ ಹೊಂದಿವೆ ಎಂದರು.
ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ರಾಮಕೃಷ್ಣ ಮಾತನಾಡಿ, ಸಂಖ್ಯಾಶಾಸ್ತ್ರ ರಚನಾತ್ಮಕವಾಗಿ ಬಳಕೆಯಾದಲ್ಲಿ ಇತ್ಯಾತ್ಮಕ ಬೆಳವಣಿಗೆಯೆಂದೂ ಉದಾಸೀನವಾದಲ್ಲಿ ನೇತ್ಯಾತ್ಮಕ ಬೆಳವಣಿಗೆಯಾಗಿ ಯಾವುದೇ ಯೋಜನೆಗಳೂ ವಿಲವಾಗುವುದು ಶತಸಿದ್ಧವೆಂದರು.
ಸಮಾರಂಭದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಸಿ.ನಾಗರಾಜು, ಡಾ.ಜಿ.ಮಹೇಶ್‌ಕುಮಾರ್, ಇಇ ವಿಭಾಗದ ಡಾ.ದೇವಕಿ, ಶ್ರೀದೇವಿ ಎಂಬಿಎ ವಿಭಾಗದ ಪ್ರೊ.ಬಿ.ಎನ್.ಪ್ರತಾಪ್, ಪ್ರೊ.ನಸೀಬ್, ಪ್ರೊ.ಗ್ರೇಸ್ ಹೇಮಲತಾ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್ ಕುಲಕರ್ಣಿ, ಡಾ.ಎಸ್.ಪನ್ನೀರ್‌ಸೆಲ್ವಂ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
Comments are closed.