ತುಮಕೂರು: ನಗರದ ಹೃದಯ ಭಾಗದಲ್ಲಿರುವ ಅಮಾನಿಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಬೋಟ್ ರೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹೇಮಾವತಿ ನದಿ ನೀರಿನಿಂದ ತುಂಬಿ ಕಂಗೊಳಿಸುತ್ತಿರುವ ಅಮಾನಿಕೆರೆಯಲ್ಲಿ ಬೋಟ್ ರೈಡಿಂಗ್ ಗೆ ಸ್ವತಃ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಬೋಟ್ ಏರಿ ರಾಷ್ಟ್ರಧ್ವಜ ಹಿಡಿದು ರೈಡ್ ಮಾಡುವ ಮೂಲಕ ಚಾಲನೆ ನೀಡಿದರು.
ಬೋಟ್ ರೈಡಿಂಗ್ ತುಂಬಾ ಚೆನ್ನಾಗಿತ್ತು, ಅಮಾನಿಕೆರೆ ಅಂಗಳದಲ್ಲಿ ಒಂದು ರೈಡ್ ಹೋಗುವುದು ತುಂಬಾ ಮಜಾ ನೀಡಲಿದೆ. ತುಮಕೂರಿನ ಜನರಿಗೆ ಬೋಟ್ ರೈಡಿಂಗ್ ಸಿಕ್ಕಿರುವುದು ಸಂತೋಷದ ವಿಚಾರ, ಜನರು ಈ ವ್ಯವಸ್ಥೆಯನ್ನು ಬಳಸಿಕೊಂಡು ಸಂಭ್ರಮ ಪಡುವುದರಲ್ಲಿ ಅನುಮಾನವಿಲ್ಲ ಎಂದು ಸಚಿವ ಪರಮೇಶ್ವರ್ ಖುಷಿ ವ್ಯಕ್ತಪಡಿಸಿದರು.
ಕೋಟ್ಯಂತರ ರೂಪಾಯಿಗಳಲ್ಲಿ ಅಮಾನಿಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ. ಸುಂದರ ಪಾರ್ಕ್, ವಾಕಿಂಗ್ ಟ್ರಾಕ್, ಮಕ್ಕಳಿಗೆ ಆಟಿಕೆ ವ್ಯವಸ್ಥೆ, ಸಂಗೀತ ಕಾರಂಜಿ ವ್ಯವಸ್ಥೆ ಇದ್ದು ನಗರದ ಜನರು ಜನರು ಇದನ್ನು ಸದ್ಭಳಕೆ ಮಾಡಿಕೊಳ್ಳಲಿ. ಅಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತಂದು ಸಂಭ್ರಮದಿಂದ ಕಾಲ ಕಳೆಯಬಹುದು ಎಂದು ತಿಳಿಸಿದರು.
ಸಚಿವರಿಂದಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಬೋಟ್ ರೈಡಿಂಗ್ ಮಾಡಿ ಸಂಭ್ರಮಿಸಿದರು.
ಮಹಿಳೆಯರಿಗೆ ಉಚಿತ
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಹಲವು ಉಚಿತ ಗ್ಯಾರಂಟಿ ನೀಡಿ ಜಾರಿಗೆ ತರಲಾಗುತ್ತಿದೆ, ಇದೇ ಮಾದರಿಯಲ್ಲಿ ತುಮಕೂರು ಅಮಾನಿಕೆರೆಯಲ್ಲಿ ಬೋಟ್ ರೈಡಿಂಗ್ ಮಾಡಲು ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ನೂರಾರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬೋಟ್ ರೈಡಂಗ್ ಹೋಗಿ ಸಖತ್ ಎಂಜಾಯ್ ಮಾಡುತ್ತಿದ್ದರು.
ಮಸ್ತ್ ಮಜಾ ಮಾಡಿದ ವಿದ್ಯಾರ್ಥಿಗಳು
ಇನ್ನು ನಗರದ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಅಮಾನಿಕೆರೆಗೆ ಬಂದು ಬೋಟ್ ರೈಡಿಂಗ್ ಮಾಡಿ ಮಸ್ತ್ ಮಾಜಾ ಮಾಡಿದರು. ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಬೋಟಿಂಗ್ ವ್ಯವಸ್ಥೆ ಮಾಡಿರುವುದು ತುಂಬಾ ಖುಷಿ ಎನಿಸಿದೆ, ಬೋಟಿಂಗ್ ಮಾಡಲು ನದಿ, ಸಮುದ್ರ ಇರುವ ಪ್ರವಾಸಿ ತಾಣಗಳಿಗೆ ಹೋಗಬೇಕಿತ್ತು. ಆದರೆ ನಮ್ಮ ತುಮಕೂರಿನಲ್ಲೇ ಬೋಟಿಂಗ್ ವ್ಯವಸ್ಥೆ ಮಾಡಿರುವುದು ನಮಗೆ ಖುಷಿ ನೀಡಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಯ ವ್ಯಕ್ತಪಡಿಸಿದರು.
ಶನಿವಾರ, ಭಾನುವಾರ ಬೋಟಿಂಗ್
ಸ್ವಾತಂತ್ರ ದಿನದ ಪ್ರಯುಕ್ತ ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಮಹಿಳೆಯರಿಗೆ ಉಚಿತ ಬೋಟಿಂಗ್ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರ ಸುಮಾರು 600 ಮಕ್ಕಳು ಬೋಟಿಂಗ್ ನಲ್ಲಿ ಪಾಲ್ಗೊಂಡರು, ಈ ವೇಳೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಕ್ಕಳ ಜೊತೆ ಬೋಟ್ ರೈಡಿಂಗ್ ಮಾಡಿದರು, ಜೊತೆಗೆ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಹೇಳಿದರು, ರಾಷ್ಟ್ರಧ್ವಜ ಅಭಿಯಾನ, ರಾಷ್ಟ್ರ ಧ್ವಜದ ಮಹತ್ವ ಸಾರಿದರು.
ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಬೋಟ್ ರೈಡಿಂಗ್ ವ್ಯವಸ್ಥೆ ಇರಲಿದೆ, ನಿಮ್ಮ ಕುಟುಂಬಗಳೊಟ್ಟಿಗೆ ಬಂದು ಬೋಟ್ ರೈಡಿಂಗ್ ಮಾಡಿ, ಅಮಾನಿಕೆರೆಯ ಅಂದ ಕಣ್ತುಂಬಿಕೊಳ್ಳುವಂತೆ ತಿಳಿಸಿದರು.
Comments are closed.