ತುಮಕೂರು: ಉದ್ಯೋಗ ಅರಸಿ ಬಂದವರು ಉದ್ಯೋಗದಾತ ಸಂಸ್ಥೆಯನ್ನು ಉತ್ತುಂಗಕ್ಕೆ ಬೆಳಸಬೇಕು, ಯಾವುದೇ ಉದ್ಯೋಗವಾಗಲಿ ಶ್ರದ್ಧೆಯಿಂದ ನಿರ್ವಹಿಸಿದರೆ ಪ್ರಗತಿ ಹೊಂದುವುದು ಖಂಡಿತ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಕೌಶಲ್ಯಅಭಿವೃದ್ಧಿ ಮತ್ತು ಉದ್ಯೋಗ ಕೋಶ, ವಿಜ್ಞಾನ ಹಾಗೂ ಕಲಾ ಕಾಲೇಜು ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿ, ದೇಶದ ಭವಿಷ್ಯವಿರುವುದು ಯುವ ಜನತೆಯ ಶಕ್ತಿಯಲ್ಲಿ, ಉದ್ಯೋಗಾಂಕ್ಷಿಗಳು ನಿಮ್ಮ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಪಡೆಯುವ ಕೌಶಲ್ಯದ ಮೇಲೆ ಗಮನ ವಹಿಸಬೇಕು. ಒಳ್ಳೆಯ ಸಂವಹನ ಕೌಶಲ್ಯವಿರಬೇಕು. ನಿಮ್ಮ ಆತ್ಮವಿಶ್ವಾಸವೇ ಉದ್ಯೋಗ ಪಡೆಯುವ ಮೊದಲ ಹಂತದ ಗೆಲುವು ಎಂದರು.
ಕ್ವೆಸ್ ಕಾರ್ಪ್ ಲಿ. ನ ಡೈರೆಕ್ಟರ್ ಜಾಕೋಬ್ ಮ್ಯಾಥ್ಯೂ ಮಾತನಾಡಿ, ನಿಮ್ಮ ಶಿಕ್ಷಣ, ಪದವಿ, ಸರ್ಟಿಫಿಕೇಟ್ ಉದ್ಯೋಗ ಸಂದರ್ಶನಕ್ಕೆ ಬೇಕಾದ ಅಡಿಪಾಯವಷ್ಟೆ, ನಿಮ್ಮಲ್ಲಿರುವ ವಿಭಿನ್ನ ಕೌಶಲ್ಯವೇ ಉದ್ಯೋಗಕ್ಕೆ ಬೇಕಾಗಿರುವ ಮುಖ್ಯ ಅಂಶ ಎಂದು ತಿಳಿಸಿದರು.
30ಕ್ಕೂ ಹೆಚ್ಚು ವಿವಿಧ ಪ್ರತಿಷ್ಠಿತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು, ಪದವಿ, ಡಿಪ್ಲೀಮಾ, 12ನೇ ತರಗತಿ, 10ನೇತರಗತಿ ವಿದ್ಯಾರ್ಹತೆ ಹೊಂದಿರುವ, ಈಗಾಗಲೇ ವೃತ್ತಿಯಲ್ಲಿ ಅನುಭವ ಹೊಂದಿರುವ 1000ಕ್ಕೂ ಅಧಿಕ ಆಸಕ್ತರು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.
ತುಮಕೂರು ವಿಶ್ವ ವಿದ್ಯಾಲಯದ ಉದ್ಯೋಗ ನಿಯೋಜನ ಅಧಿಕಾರಿ ಡಾ.ಕೆ.ಜಿ. ಪರಶುರಾಮ, ಡಾ.ಪದ್ಮನಾಭ.ಕೆ.ವಿ, ಡಾ.ವಿಜಯ್ ಕುಮಾರ್.ಜಿ.ಆರ್, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕರಿಯಣ್ಣ.ಬಿ, ವಿವಿ ವಿಜ್ಞಾನ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್.ಡಿ.ಬಿ, ಕ್ವೆಸ್ ಕಾರ್ಪ್ ಲಿ. ನ ಜೋನಲ್ ಮ್ಯಾನೇಜರ್ ಹರಿಪ್ರಸಾದ್.ಬಿ.ಎಸ್, ಕ್ವೆಸ್ ಕಾರ್ಪ್ ಲಿ. ನ ನವೀನ್, ಹಿರಿಯ ಪ್ರಾಧ್ಯಾಪಕ ಪ್ರೊ.ಮೋಹನ್ ರಾವ್ ಭಾಗವಹಿಸಿದ್ದರು.
Comments are closed.