ಕಸಾಪ ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಸಿದ್ದಲಿಂಗಪ್ಪ ನಾಮಪತ್ರ

199

Get real time updates directly on you device, subscribe now.

ತುಮಕೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆ.ಎಸ್.ಸಿದ್ದಲಿಂಗಪ್ಪ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಅಭಿಮಾನಿಗಳು, ಸಹಪಾಠಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ ಕಳೆದ ಡಿಸೆಂಬರ್‌ನಲ್ಲಿ ನಿವೃತ್ತನಾಗಿದ್ದೇನೆ, ನಿವೃತ್ತಿ ನಂತರ ಕಲೆ ಮತ್ತು ಸಾಹಿತ್ಯದ ಸೇವೆ ಮಾಡುವ ಉದ್ದೇಶದಿಂದ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಉದ್ದೇಶದಿಂದ ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪ್ರವಾಸ ಮಾಡಿ ಸ್ನೇಹಿತರು, ಉಪನ್ಯಾಸಕ ಬಂಧಗಳು, ಸಾಹಿತ್ಯಾಸಕ್ತರನ್ನು ಭೇಟಿ ಮಾಡಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ, ಕಸಾಪ ಮತದಾರರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಕಸಾಪ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಹಲವು ಯೋಜನೆಗಳನ್ನು ಜಾರಿಗೆ ತರಬೇಕೆಂಬ ಹಂಬಲ ಹೊಂದಿದ್ದು, ಸಾಹಿತ್ಯವನ್ನು ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಗ್ರಾಮೋತ್ಸವ, ನಿತ್ಯೋತ್ಸವ ಕಾರ್ಯಕ್ರಮ  ಆಯೋಜಿಸಬೇಕೆಂಬ ಬಯಕೆ ಇದೆ, ಅಲ್ಲದೆ ಕನ್ನಡ ಕಲಾ ಗ್ರಾಮ ಎಂಬ ವಿನೂತನ ಯೋಜನೆಯೊಂದನ್ನು ಜಾರಿಗೆ ತರುವ ಇರಾದೆ ನನ್ನದು, ಇದರ ಜೊತೆಗೆ ಕಸಾಪಗೆ ಆಧುನಿಕ ಸ್ಪರ್ಷ ನೀಡಬೇಕೆಂಬ ಆಸೆ ನನ್ನದು, ಕನ್ನಡದಲ್ಲಿ ಸಂಶೋ‘ನೆ ನಡೆಸುವ ಸಂಶೋಧನಾರ್ಥಿಗಳಿಗಾಗಿ ಅಕಾರ ಗ್ರಂಥಗಳನ್ನು ಒಳಗೊಂಡ ಗ್ರಂಥಾಲಯ ಸ್ಥಾಪಿಸುವುದರ ಜೊತೆಗೆ ಐದು ವರ್ಷಗಳಲ್ಲಿ ಹೆಚ್ಚು ರಚನಾತ್ಮಕ ಕಾರ್ಯಕ್ರಮ ಆಯೋಜಿಸಬೇಕೆಂಬ ಇಚ್ಚೆ ಹೊಂದಿರುವುದಾಗಿ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಈ ವೇಳೆ ನಿವೃತ್ತ ಪ್ರಾಂಶುಪಾಲ ಎಂ.ಹೆಚ್.ನಾಗರಾಜು, ಮಹದೇವಪ್ಪ, ಉಪನ್ಯಾಸಕರು ಮತ್ತು ಲೇಖಕರಾದ ಡಾ.ರವಿಕುಮರ್ ನಿ.ಹಾ, ಡಾ.ಮುದ್ದುವೀರಪ್ಪ, ಸಂಜೀವ್‌ಕುಮಾರ್ ಮತ್ತಿತರರು ಜೊತೆಗಿದ್ದರು.

Get real time updates directly on you device, subscribe now.

Comments are closed.

error: Content is protected !!