ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಳ್ಳಲಿ: ಅಶ್ವಿಜ

202

Get real time updates directly on you device, subscribe now.


ತುಮಕೂರು: ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಬೆಳೆಸಿಕೊಳ್ಳುವಂತಹ ಅವಕಾಶ ಒದಗಿಸಿದಾಗ ಪ್ರತಿಯೊಂದು ಮಗುವೂ ದೇಶದ ಆಸ್ತಿಯಾಗಿ ಬೆಳೆಯುತ್ತದೆ, ಎಲ್ಲದಕ್ಕೂ ಮೊದಲು ನಮ್ಮ ದೇಶವೆಂಬ ಭಾವವು ನಮ್ಮಲ್ಲಿ ಮೊಳೆದಾಗ ಮನಸ್ಸು ಮನಸ್ಸುಗಳ ನಡುವೆ ಯಾವುದೇ ಭೇದ ಭಾವವಿರುವುದಿಲ್ಲ, ದೇಶದ ಒಳಿತಿಗಾಗಿ ನಾವೆಲ್ಲರೂ ಕೈಜೋಡಿಸಬೇಕು ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ.ಬಿ.ವಿ. ಹೇಳಿದರು.

ನಗರದ ವಿದ್ಯಾನಿಧಿ ಕಾಲೇಜಿನ ಆವರಣದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿದ್ದ ನನ್ನ ಮಣ್ಣು ನನ್ನ ಹೆಮ್ಮೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವ ಆಚರಿಸಿದ ಬಳಿಕ ಪ್ರತಿ ವರ್ಷವೂ ನಿರ್ದಿಷ್ಟ ಧ್ಯೇಯಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಘರ್ ಘರ್ತಿರಂಗಾ, ದಿಲ್ ಸೇ ತಿರಂಗಾ, ಸೆಲ್ಫೀ ವಿದ್ ತಿರಂಗಾದಲ್ಲಿ ಈಗಾಗಲೇ ದೇಶ ಪ್ರೇಮಿಗಳು ಭಾಗವಹಿಸಿದ್ದಾರೆ.ದೇಶರಕ್ಷಣೆಯಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ನಮ್ಮ ಹೆಮ್ಮೆಯ ಸೈನಿಕರನ್ನು ಸ್ಮರಿಸುವ, ಗೌರವಿಸುವ ಅಭಿಯಾನವು ಮುಂದುವರಿಯಲಿದೆ. ಮಕ್ಕಳಲ್ಲಿ ದೇಶಭಕ್ತಿ ಸದಾ ಜಾಗೃತವಾಗಿರಲಿ, ಹೆಚ್ಚಿನ ವಿದ್ಯಾರ್ಥಿಗಳು ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆ ಅಲಂಕರಿಸುವುದರೊಂದಿಗೆ ಸದಾ ಸಾರ್ವಜನಿಕರಿಗೆ ಸೇವೆ ಸಲ್ಲಿಯುವ ಅವಕಾಶ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಹುರಿ ದುಂಬಿಸಿದರು.

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಮಕ್ಕಳು ದೇಶದ ಕುರಿತು ಉನ್ನತ ಕನಸುಗಳನ್ನಿರಿಸಿಕೊಂಡು ಎತ್ತರದ ಗುರಿ ಸಾಧಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ದೇಶ ಮುಂದುವರಿದ ರಾಷ್ಟ್ರವೆನಿಸುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವಿದ್ದಾಗ ಅವರು ತೊಡಗಿಸಿಕೊಳ್ಳುವ ಪ್ರತಿ ಕೆಲಸವೂ ಅರ್ಥ ಗರ್ಭಿತವಾಗಿರುತ್ತದೆ, ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಂಡು ದೊಡ್ಡ ಹುದ್ದೆಗಳಿಗೇರುವುದು ಅವರಿಗೆ ಸಾಧ್ಯವಾಗಲಿ, ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಯೋಧರನ್ನು ನೆನೆಯುವುದರೊಂದಿಗೆ ಪ್ರಸ್ತುತ ದೇಶ ಸೇವೆಯಲ್ಲಿ ತೊಡಗಿಸಿ ಕೊಂಡಿರುವವರನ್ನು ಸದಾ ಗೌರವಿಸುವ ಮನೋಧರ್ಮ ಬೆಳೆಸಿಕೊಳ್ಳಿ ಎಂದರು.

ತುಮಕೂರು ಮಹಾನಗರ ಪಾಲಿಕೆಯ ಉಪ ಮೇಯರ್ ನರಸಿಂಹ ಮೂರ್ತಿ, ಉಪನ್ಯಾಸಕಿ ಆರತಿ ಪಟ್ರಮೆ, ಗೋವಿಂದರಾಜು, ವಿದ್ಯಾನಿಧಿಯ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!