ಮಧುಗಿರಿ: ವಯೋ ವೃದ್ಧರು, ಮಹಿಳೆಯರು ಮೂರು ಕಿ.ಮೀ ದೂರದ ನ್ಯಾಯಬೆಲೆ ಅಂಗಡಿಗೆ ಹೋಗಿ ಆಹಾರ ಪದಾರ್ಥ ಪಡೆಯಲು ಇನ್ನು ಮುಂದೆ ಕಷ್ಟ ಪಡಬೇಕಿಲ್ಲ, ನಿಮ್ಮ ಗ್ರಾಮದಲ್ಲಿಯೇ ಸರಕಾರಿ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಲಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಕಸಬಾ ವ್ಯಾಪ್ತಿಯ ಕೆರೆಗಳ ಪಾಳ್ಯ ಗ್ರಾಮದಲ್ಲಿ ನೂತನ ನ್ಯಾಯ ಬೆಲೆ ಅಂಗಡಿಗೆ ಚಾಲನೆ ನೀಡಿ ಮಾತನಾಡಿ, ಕೆರೆಗಳ ಪಾಳ್ಯ ಮುಖ್ಯ ರಸ್ತೆಯಲ್ಲಿದ್ದು ಇಲ್ಲಿಂದ ಸುಮಾರು ಮೂರು ಕಿ.ಮೀ ಹೋಗಿ ಈ ಹಿಂದೆ ಗ್ರಾಮಸ್ಥರು ಹರಿಹರ ರೊಪ್ಪದಲ್ಲಿದ್ದ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥ ಪಡಿಯಬೇಕಾದ ಅನಿರ್ವಾಯವಿತ್ತು, ಆಹಾರ ಪದಾರ್ಥ ಪಡೆಯಲು ಹೋಗಬೇಕಾದರೆ ಮುಖ್ಯ ರಸ್ತೆಯಲ್ಲಿ ದಾಟಿ ಹೋಗುವಾಗ ಆಕಸ್ಮಿಕವಾಗಿ ಅಪಘಾತ ಸಂಭಂವಿಸಿವೆ, ವಯೋವೃದ್ಧರಿಗೆ ಅಲ್ಲಿಗೆ ಹೋಗಿ ಬರಲು ಕಷ್ಟಕರವಾಗಿತ್ತು ಎಂಬುದನ್ನು ಮನಗೊಂಡಿದ್ದೇನೆ, ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ನಿಮ್ಮಗಳ ಮನವಿಯಂತೆ ಗ್ರಾಮದಲ್ಲಿ ಸರಕಾರಿ ನ್ಯಾಯ ಬೆಲೆಯ ಅಂಗಡಿ ತೆರೆಯಲಾಗಿದೆ, ಇನ್ನೂ ಗ್ರಾಮಸ್ಥರು ಆತಂತಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಅನ್ಯಭಾಗ್ಯ ಯೋಜನೆಯಿಂದಾಗಿ ಅದೆಷ್ಟೋ ಕುಟುಂಬಗಳಿಗೆ ಅನೂಕೂಲವಾಗಿದೆ, ಹಸಿವಿನ ಬೆಲೆ ಏನೆಂದು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ, ಅರ್ಹರು ಸರ್ಕಾರಿ ಸವಲತ್ತು ಬಳಸಿಕೊಳ್ಳಿ ಹಾಗೂ ಮುಂದಿನ ದಿನಗಳಲ್ಲಿ ವರ್ಷಕ್ಕೆ ಒಂದು ಬಾರಿ ನಡೆಯುವ ಹಾಸನಾಂಬೆಯ ಉತ್ಸವವು ನ.2 ರಿಂದ ನ.15 ರ ವರೆಗೆ ದೇಗುಲದ ಬಾಗಿಲು ತೆರದಿರುತ್ತದೆ ಮತ್ತು ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಿರುವುದರಿಂದ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ, ನೀವುಗಳು ಸಹ ದೇವಿಯ ದರ್ಶನ ಪಡೆದುಕೊಳ್ಳಿ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ , ನಿರ್ದೇಶಕ ಬಿ.ನಾಗೇಶ್ ಬಾಬು ,ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭಾ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಮಂಟೇಸ್ವಾಮಿ, ಗೋಪಾಲಯ್ಯ , ಎಂ.ಡಿ.ಗಂಗರಾಜು, ಗೌಡಮುದ್ದಯ್ಯ, ಕೆ.ಪಿ.ಚಿತ್ತಪ್ಪ, ವೀರಭದ್ರಯ್ಯ, ಸದಸ್ಯರಾದ ಶಿವಾನಂದ್, ರಾಮಣ್ಣ ,ಲಕ್ಷ್ಮಮ್ಮ ಲಕ್ಷ್ಮೀಕುಮಾರ್, ರಾಮಣ್ಣ, ರಾಜೇಶ್, ನಾಗಭೂಷಣ್, ಗೌರಮ್ಮ, ಪಿಡಿಓ ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.
Comments are closed.