ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅಪಾರ

202

Get real time updates directly on you device, subscribe now.


ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಹೋರಾಟ, ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಗೌರವಿಸಲು, ಮಾತೃಭೂಮಿ ಬಗ್ಗೆ ಜನರಲ್ಲಿ ಪ್ರೀತಿ ಅಭಿಮಾನ ಮೂಡಿಸಲು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯಿಂದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದರ ಪ್ರಯುಕ್ತ ನಗರದ ಎಲ್ಲಾ ವಾರ್ಡ್ ಗಳಲ್ಲಿ ರಾಷ್ಟ್ರ ಧ್ವಜಾರೋಹಣ, ಪಂಚಪ್ರಾಣ ಪ್ರತಿಜ್ಞಾ ವಿಧಿ ಸ್ವೀಕಾರ, ಮಣ್ಣು ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಹೇಳಿದರು.

ನಗರದ 5ನೇ ವಾರ್ಡಿನ ಸ್ವಾತಂತ್ರ್ಯ ವೃತ್ತದಲ್ಲಿ ಏರ್ಪಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಗೌರವದ ಸ್ಮರಣಾರ್ಥ ಪ್ರತಿಷ್ಠಾಪಿಸಿರುವ ಶಿಲಾ ಫಲಕ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಪಂಚಪ್ರಾಣ ಪ್ರತಿಜ್ಞಾ ವಿಧಿ ಬೋಧಿಸಿದ ಆಯುಕ್ತರು, ಹಲವು ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅವರ ಕೊಡುಗೆಯನ್ನು ಎಲ್ಲರೂ ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮ ಮಣ್ಣು ನಮ್ಮ ದೇಶ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ವಾರ್ಡ್ ಗಳಿಂದ ಮಣ್ಣು ಸಂಗ್ರಹಿಸಿ, ಕೊನೆಯ ದಿನ ಅಮಾನಿಕೆರೆ ಅಂಗಳದಲ್ಲಿ ಆ ಮಣ್ಣು ಬಳಸಿ 75 ಗಿಡ ನೆಡಲಾಗುವುದು, ಉಳಿದ ಮಣ್ಣನ್ನು ದೆಹಲಿಗೆ ಕಳುಹಿಸಲಾಗುವುದು ಎಂದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದ ಮಹಾತ್ಮ ಗಾಂಧಿ ಸ್ಮಾರಕ ಭವನದ ಬಳಿ, ಅಮಾನಿಕೆರೆಯಲ್ಲಿ, ಟೌನ್ ಹಾಲ್ ಬಳಿ, ಈಗ ಸ್ವಾತಂತ್ರ್ಯ ವೃತ್ತದಲ್ಲಿ ಸ್ವಾತಂತ್ರ್ಯ ಯೋಧರ ಗೌರವಾರ್ಥ ಶಿಲಾ ಫಲಕ ಪ್ರತಿಷ್ಠಾಪಿಸಲಾಗಿದೆ. ನಮ್ಮ ದೇಶ, ನಮ್ಮ ಸಂವಿಧಾನ ಗೌರವಿಸಿ ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸಲು ಶಿಕ್ಷಕರು, ಪೋಷಕರು ಸಹ’ಕರಿಸಬೇಕು ಎಂದು ಆಯುಕ್ತೆ ಅಶ್ವಿಜ ಮನವಿ ಮಾಡಿದರು.

ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮನೋಹರಗೌಡ, ಮಾಜಿ ಯೋಧರ ಸಂಘದ ಅಧ್ಯಕ್ಷ ಪಾಂಡುರಂಗ, ಮುಖಂಡ ಜಿಯಾ, ನಗರ ಪಾಲಿಕೆ ಪರಿಸರ ಇಂಜಿನಿಯರ್ ಪೂರ್ಣಿಮಾ, ಸೇರಿದಂತೆ ಮಾಜಿ ಯೋಧರು, ಬಿಷಪ್ ಸಾರ್ಜೆಂಟ್ ಶಾಲೆಯ ಎನ್ಸಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!