ನವಜಾತ ಶಿಶುವಿಗೆ ತಾಯಿ ಎದೆ ಹಾಲು ಶ್ರೇಷ್ಠ

209

Get real time updates directly on you device, subscribe now.


ತುಮಕೂರು: ನವಜಾತ ಶಿಶುವಿಗೆ ತಾಯಿಯ ಎದೆ ಹಾಲು ಶ್ರೇಷ್ಠವಾಗಿದ್ದು, ಕನಿಷ್ಠ 18 ವಾರಗಳ ವರೆಗೂ ಬೇರೆ ಯಾವುದೇ ರೀತಿಯ ಆಹಾರ ನೀಡದೆ ತಾಯಿ ಹಾಲನ್ನೇ ಕೊಡಬೇಕು ಎಂದು ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಸುಬ್ರಮಣ್ಯ ತಿಳಿಸಿದರು.

ಅಗಳಕೋಟೆಯ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಸ್ತನಪಾನ ವಾರಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಗ್ಯಲೈಫ್ ಹೆಸರಿನಲ್ಲಿ ಪ್ರತಿ ವರ್ಷ ಏಳು ವಿಶೇಷ ಥೀಮ್ ಗಳೊಂದಿಗೆ ಆಚರಿಸಲಾಗುತ್ತದೆ, ಮೊದಲ ಬಾರಿಗೆ 1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಆಚರಣೆ ಜಾರಿಗೆ ತಂದಿತು ಎಂದರು.

ಸ್ತನಪಾನದಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ, ತಾಯಿಯ ಎದೆ ಹಾಲಿನಲ್ಲಿ ಅನೇಕ ಪೌಷ್ಟಿಕಾಂಶಗಳಿದ್ದು, ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಮೊದಲ 6 ತಿಂಗಳು ಮಗು ತಾಯಿಯ ಎದೆಹಾಲನ್ನೇ ಕುಡಿಯುವುದು ಸೂಕ್ತ ಕ್ರಮ ಎಂದರು.

ಇವತ್ತಿನ ವೇಗದ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಿಂದಾಗಿ ಮಕ್ಕಳಿಗೆ ಬಾಟಲ್ ಹಾಲನ್ನೇ ಹೆಚ್ಚಾಗಿ ಕುಡಿಸುವುದು ಅಭ್ಯಾಸ ಮಾಡಿಸುತ್ತಿದ್ದಾರೆ. ಇದರಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆ ಉಂಟಾಗುತ್ತದೆ. ಮಗು ಅಪೌಷ್ಟಿಕತೆಯಿಂದ ಬೇಗನೆ ಕಾಯಿಲೆಗೆ ಈಡಾಗುತ್ತದೆ. ಅಂತಹ ಸಂದರ್ಭ ಬಂದರೂ ತಾಯಿ ಯಾವುದೇ ಕಾರಣಗಳನ್ನು ತೋರದೆ ಮಗುವಿಗೆ ತಮ್ಮ ಕೆಲಸದ ಸ್ಥಳದಲ್ಲೂ ಎದೆ ಹಾಲುಣಿಸಬೇಕು. ಇದಕ್ಕೆ ಕೆಲಸದ ಸ್ಥಳದಲ್ಲಿನ ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಸಹಕಾರ ಮತ್ತು ಬೆಂಬಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ನರ್ಸಿಂಗ್ ಪ್ರಾಂಶುಪಾಲರಾದ ಸುಜಾತ, ಪಿಡಿಯಾಟ್ರಿಕ್ ವಿಭಾಗ ಡಾ.ಅಪೂರ್ವ ಸೇರಿದಂತೆ ಕಾಲೇಜಿನ ವೈದ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!