ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ನೀಡಲು ರೈತರ ಆಗ್ರಹ

713

Get real time updates directly on you device, subscribe now.


ಮಧುಗಿರಿ: ಕೃಷಿ ಪಂಪ್ ಸೆಟ್ ಗಳಿಗೆ ಗುಣಮಟ್ಟದ ವಿದ್ಯುತ್ ನೀಡುವ ಮೂಲಕ ಬೆಳೆ ಉಳಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ಬೆಸ್ಕಾಂ ಇಲಾಖೆಯ ಕಾರ್ಯ ನಿರ್ವಾಹಕ ನಿರ್ವಾಹಕ ಇಂಜಿನಿಯರ್ ಜಗದೀಶ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಮಧುಗಿರಿ ತಾಲೂಕಿನ ಪುರವರ ಹಾಗೂ ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಗಿರೇಗೌಡನಹಳ್ಳಿ, ಬಡಕನಹಳ್ಳಿ, ಬೀರನಹಳ್ಳಿ , ಚುಂಚೇನಹಳ್ಳಿ ಹಾಗೂ ಯರಗುಂಟೆ ಸುತ್ತಮುತ್ತಲಿನ ಗ್ರಾಮದಲ್ಲಿ 15 ದಿನಗಳಿಂದ 2 ಮತ್ತು 3 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಬೆಳೆ ಒಣಗುವ ಹಂತ ತಲುಪಿದೆ.

ಲೈನ್ ಮನ್ ಗಳು ರೈತರ ಜೊತೆ ಸಹಕರಿಸುತ್ತಿಲ್ಲ. ಲೈನ್ ಗಳು ಕೂಡ ಸುಸ್ಥಿತಿಯಲ್ಲಿಲ್ಲ, ಜಂಗಲ್ ಕೂಡ ತೆಗೆಯುವುದಿಲ್ಲ, ಲೈನ್ ಮನ್ ಗಳು ಸುಗಮವಾಗಿ ವಿದ್ಯುತ್ ಸರಬರಾಜಾಗಲು ಲೈಲ್ ಗಳನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

250 ವೋಲ್ಟೇಜ್ ವಿದ್ಯುತ್ ಸರಬರಾಜು ಆಗುತ್ತಿದ್ದು ಇದರಿಂದ ಪ್ಯಾನಲ್ ಬೋರ್ಡ್, ಮೋಟಾರ್ ಗಳು ನಿರಂತರವಾಗಿ ಸುಟ್ಟು ಹೋಗುತ್ತಿವೆ. ರೈತರಿಗೆ ನಷ್ಟ ಉಂಟಾಗುತ್ತಿದೆ. ವಿದ್ಯುತ್ ಸರಬರಾಜು ಇಲ್ಲದೇ ಶೇ.50 ರಷ್ಟು ಬೆಳೆ ಒಣಗಿ ಹೋಗಿದೆ ಎಂದು ರೈತರು ಆರೋಪಿಸಿದರು.

ರೈತ ಮುಖಂಡ ಕಾಂತರಾಜು ಮಾತನಾಡಿ, ವಿದ್ಯುತ್ ಸಮಸ್ಯೆಯ ಬಗ್ಗೆ ಬ್ಯಾಲ್ಯ ಮತ್ತು ಐ.ಡಿ.ಹಳ್ಳಿ ಅಧಿಕಾರಿಗಳ ಗಮನಕ್ಕೆ ತಂದರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ದಿನಕ್ಕೆ 8 ಗಂಟೆ ವಿದ್ಯುತ್ ಸರಬರಾಜು ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ರೈತ ಮುಖಂಡರಾದ ಬೇಲದ ರಂಗಪ್ಪ, ಶ್ರೀನಿವಾಸ, ಲಕ್ಷ್ಮೀನಾರಾಯಣ ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!