ನಾವೆಲ್ಲಾ ಜಾತಿ ವ್ಯವಸ್ಥೆಯ ಬೇಲಿ ದಾಟಬೇಕಿದೆ

702

Get real time updates directly on you device, subscribe now.


ತುಮಕೂರು: ಸಮಾನತೆ ಸಾರುವ ಉತ್ತಮರಿಗೆ ಬೆಳಕಾಗಿ, ಅಸಮಾನತೆಯ ಕಿಡಿ ಹಚ್ಚುವ ಮೂಢರಿಗೆ ಬೆಂಕಿಯಾಗಿರುವುದೇ ಅಂಬೇಡ್ಕರ್ ಅವರ ಭಾಷಣಗಳು ಮತ್ತು ಬರಹಗಳು ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಯುಷ್ಮಾನ್ ಮಹೇಶ್.ಆರ್. ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಬಿ. ಆರ್.ಅಂಬೇಡ್ಕರ್ ಅವರ ಸಮಗ್ರ ಭಾಷಣಗಳು ಮತ್ತು ಬರಹಗಳು ಹಾಗೂ ಸಂವಿಧಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಯುಎನ್ಒ 2016 ರಿಂದ ಅಂಬೇಡ್ಕರ್ ಜಯಂತಿಯನ್ನು ವಿಶ್ವಜ್ಞಾನದ ದಿನವಾಗಿ ಆಚರಿಸುತ್ತಿದೆ. ನಾಗರಿಕತೆ ಹೆಚ್ಚಾದಂತೆ ಅಸಮಾನತೆ, ಜಾತಿ ವ್ಯವಸ್ಥೆಯ ಬೇಲಿ ದಾಟಬೇಕಾದ ನಾವೆಲ್ಲರೂ ಮತ್ತದೇ ಮೂಢತೆಯ ಕತ್ತಲೆಡೆಗೆ ಹೋಗುತ್ತಿದ್ದೇವೆ. ಅಂಬೇಡ್ಕರ್ ಅವರ ಕನಸು ಜಾತಿ, ಮತ, ಪಂಗಡಗಳಿಂದ ಮುಕ್ತವಾದ ಭವ್ಯ ಭಾರತ ನೋಡುವುದಾಗಿತ್ತು. ಅದಕ್ಕಾಗಿ ಅವರು ಶ್ರಮಿಸಿದರು ಎಂದರು.

ನನ್ನ ಪದವಿಗಳು, ಜ್ಞಾನ ಭಂಡಾರ ಭಾರತದಲ್ಲಿ ನೆಲೆಯೂರಿರುವ ಅಸಮಾನತೆಯ ಬೇರನ್ನು ತೊಡೆದು ಹಾಕಲು ಶಿಕ್ಷಣ ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕಾಗಬೇಕು, ಉದ್ಯೋಗವು ಇಚ್ಛಿಸಿದ ಹಕ್ಕಾಗಬೇಕು. ಆಗಷ್ಟೇ ಭಾರತ ವಿಶ್ವ ಮಾನವವಾಗುವುದು ಎಂದು ಅಂಬೇಡ್ಕರ್ ತಮ್ಮ ಭಾಷಣ ಮತ್ತು ಬರಹಗಳ ಮೂಲಕ ಭಾರತದ ಜನತೆಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು ಎಂದು ತಿಳಿಸಿದರು.
ಬಸವಣ್ಣ, ಬುದ್ಧ, ಕನಕದಾಸರು ನೀಡಿದ ಸಂದೇಶ ಇವ ನಮ್ಮವ ಅರ್ಥ ಮಾಡಿಕೊಳ್ಳಲು ಗ್ರಂಥಗಳನ್ನು ಓದಬೇಕಿಲ್ಲ, ಮನುಷ್ಯತ್ವವಿದ್ದರೆ ಸಾಕು, ನಾವು ಪಡೆದ ಜ್ಞಾನ ದೇಶವನ್ನುಕಟ್ಟಿ, ಬಾಬಾ ಸಾಹೇಬರ ಸಂವಿಧಾನ, ಪ್ರಜಾ ಪ್ರಭುತ್ವ ಉಳಿಸಿ ಬೆಳೆಸಿಕೊಳ್ಳುವುದಕ್ಕೆ ಮೀಸಲಿಡಬೇಕು ಎಂದರು.

ತುಮಕೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಚಿಕ್ಕಣ್ಣ ಮಾತನಾಡಿ, ಅಂಬೇಡ್ಕರ್ ಅವರ ಪತ್ರಿಕೆಗಳಾದ ಬಹಿಷ್ಕೃತ ಭಾರತ, ಜನತಾ ಮತ್ತು ಪ್ರಬುದ್ಧ ಭಾರತ, ಇವುಗಳಲ್ಲಿ ತಮ್ಮ ಬರಹಗಳ ಶಕ್ತಿಯನ್ನು ಹೊರ ಹೊಮ್ಮಿಸಿದರು. ಅಂಬೇಡ್ಕರ್ ಅವರನ್ನುಒಂದು ಜಾತಿ ಮತ ಸಮುದಾಯಕ್ಕೆ ನಾವೆಲ್ಲರೂ ಸೇರಿಸಿದರೆ ನಮ್ಮ ಮನಸು ಸಂಕುಚಿತವಾದದ್ದು ಎಂದೇ ಹೇಳಬಹುದು ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್, ವಿವಿಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಸಂಯೋಜಕ ಡಾ.ಮಹಾಲಿಂಗ.ಕೆ. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!