ತುಮಕೂರು: ಯಾವುದೇ ಭೌಗೋಳಿಕ ಪ್ರದೇಶದ ಇತಿಹಾಸ ಅಲ್ಲಿನ ಚಾರಿತ್ರಿಕ ಅಂಶಗಳ ಆಧಾರಿತವಾಗಿರುತ್ತದೆ. ಚರಿತ್ರೆಯ ಅಸ್ಥಿತ್ವ ಉಳಿಸುವ ಕಾರ್ಯ ಪತ್ರಾಗಾರದ್ದಾಗಿರುತ್ತದೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಉಪ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗವು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಾಗಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಖರ ದಾಖಲೆಗಳ ಆಧಾರವಿಲ್ಲದೆ ಸಮಾಜವೂ ಇತಿಹಾಸವನ್ನು ಒಪ್ಪುವುದಿಲ್ಲ, ಎಲ್ಲದಕ್ಕೂ ದಾಖಲೆಗಳ ಅವಶ್ಯಕತೆಯಿದೆ, ಚಾರಿತ್ರಿಕ ಆಕಾರಗಳನ್ನು ದಾಖಲಿಸಲು ಪತ್ರಾಗಾರ ಇಲಾಖೆಯು ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ದಾಖಲೆಗಳ ಸಂರಕ್ಷಣೆಯಲ್ಲಿ ಪತ್ರಾಗಾರ ಇಲಾಖೆಯು ಆಧುನಿಕ, ವೈಜ್ಞಾನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಸರ್ಕಾರಗಳ ರಚನೆಯ ನಂತರ ಆಡಳಿತ ಪಕ್ಷಗಳು ಇತಿಹಾಸದ ವೈಭವವನ್ನು, ಚಾರಿತ್ರಿಕ ಸತ್ಯಗಳನ್ನು ಉಳಿಸಿ, ಪೀಳಿಗೆಗಳಿಗೆ ವಿಷಯ ಪಸರಿಸಲು ಪತ್ರಾಗಾರ ಇಲಾಖೆ ಸ್ಥಾಪಿಸಿದವು, ದಾಖಲೆಗಳು ವ್ಯಕ್ತಿ, ಸಂಸ್ಥೆ ಹಾಗೂ ಸರ್ಕಾರಗಳ ಅಥವಾ ಆಡಳಿತ ವ್ಯವಸ್ಥೆಯ ವ್ಯವಹಾರಗಳು ಲಿಖಿತ ಮತ್ತು ಕಾಗದ ಪತ್ರಗಳ ರೂಪದಲ್ಲಿರುತ್ತವೆ ಎಂದರು.
ಸಾಂಸ್ಕೃತಿಕ, ಐತಿಹಾಸಿಕ, ಪಾರಂಪರಿಕ ಸತ್ಯಗಳು, ಅವುಗಳ ಮೌಲ್ಯಾಧಾರಗಳ ಮೇಲೆ ಪತ್ರಾಗಾರದಲ್ಲಿ ದಾಖಲೆಗಳ ಸಂಗ್ರವಿರುತ್ತದೆ ಎಂದು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಂಯೋಜಕಿ ಡಾ.ಪ್ರಿಯಾ ಠಾಕೂರ್, ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್, ವಿವಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೊನ್ಬಿಂದರ್ ಕೌರ್ ಭಾಗವಹಿಸಿದ್ದರು.
Comments are closed.