ಮಧುಗಿರಿ: ಪಟ್ಟಣದ ಡೂಮ್ ಲೈಟ್ ವೃತ್ತದಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.
ಈ ವೇಳೆ ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು ಮಾತನಾಡಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಕರೆ ನೀಡಿದ್ದಲ್ಲದೆ, ಜೀವ ಎಷ್ಟು ಅಮೂಲ್ಯ ಮತ್ತು ತಮ್ಮನ್ನು ನಂಬಿಕೊಂಡಿರುವವರ ಬಗ್ಗೆ ಚಿಂತಿಸಿ ಎಂದು ತಿಳಿ ಹೇಳಿದ ಘಟನೆ ನಡೆಯಿತು.
ಇದೇ ವೇಳೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ವಾಹನ ಕೀ ಗಳನ್ನು ಪಡೆದು ಹೆಲ್ಮೆಟ್ ತಂದ ನಂತರ ಕೀಗಳನ್ನು ವಾಪಸ್ ನೀಡಿದರು. ಯಾವುದೇ ದಂಡ ಪ್ರಯೋಗ ಮಾಡಲಿಲ್ಲ, ಕೆಲವು ವಾಹನ ಸವಾರರ ಉದ್ದಟತನ ಪ್ರದರ್ಶನವಾಯಿತು. ಇದರಿಂದಾಗಿ ಕೆಲವರು ದಂಡರ ಜೊತೆಗೆ ಹೆಲ್ಮೆಟ್ ಧರಿಸಿಕೊಂಡು ಹೋಗುವ ವರೆಗೂ ವಾಹನದ ಕೀ ಗಳನ್ನು ನೀಡಲಿಲ್ಲ.
ಪಟ್ಟಣದ ಪ್ರಮುಖ ವೃತ್ತಗಳಾದ ತುಮಕೂರು ಗೇಟ್ ವೃತ್ತ, ನೃಪತುಂಗ ವೃತ್ತ, ಪಾವಗಡ ಸರ್ಕಲ್, ಶಿರಾ ಗೇಟ್ ಸರ್ಕಲ್ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಸಿಪಿಐ ಹನುಮಂತರಾಯಪ್ಪ, ಪಿಎಸ್ಐ ವಿಜಯ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Comments are closed.