ರೈತ ಮಕ್ಕಳ ವಿದ್ಯಾಭ್ಯಾಯಾಸಕ್ಕೆ ಉಚಿತ ಬಸ್ ಪಾಸ್

198

Get real time updates directly on you device, subscribe now.

ಮಧುಗಿರಿ: ಜಿಲ್ಲೆಯಲ್ಲಿರುವ ರೈತ ಮಕ್ಕಳ ವಿದ್ಯಾಭ್ಯಾಯಾಸಕ್ಕೆ ನೆರವಾಗಲು ಉಚಿತ ಬಸ್ ಪಾಸ್ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್ ರಾಜಣ್ಣ ತಿಳಿಸಿದರು.

ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಗುರುವಾರ ವಿಎಸ್ಸೆಸ್ಸೆನ್ ಕಾರ್ಯದರ್ಶಿಯಾಗಿ ಟಿ ವಿ ಎಸ್ ಮಂಜುನಾಥ್ ಅವರನ್ನು ನೇಮಿಸಿದ ಹಿನ್ನೆಲೆಯಲ್ಲಿ ಮರುವೇಕೆರೆ, ಗಂಜಲಗುಂಟೆ, ವಿಎಸ್ಸೆಸ್ಸೆನ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕೆ ಎನ್ ರಾಜಣ್ಣ ಅರನ್ನು ಅಭಿನಂದಿಸಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುವ ಸಾಲ ಪಡೆದು ಮೀಟರ್ ಬಡ್ಡಿಯಿಂದ ಪಾರಾಗಿ ಅಭಿವೃದ್ಧಿ ಹೊಂದುವಂತೆ  ತಿಳಿಸಿ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರಿಗೂ ಸಾಲ ನೀಡಲಾಗುವುದು ಡಿಸಿಸಿ ಬ್ಯಾಂಕ್ ವತಿಯಿಂದ ಈಗಾಗಲೇ ಮೃತಪಟ್ಟ ರೈತರ ಕುಟುಂಬದ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಐವತ್ತು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಗಳ ವರೆಗೂ ಸಾಲ ನೀಡಲಾಗಿದೆ ಎಂದರು.

ಸಾಲ ಪಡೆಯುವುದಷ್ಟೆ ಅಲ್ಲದೆ ಮಾಡಿದ ಸಾಲ ಸಮಯಕ್ಕೆ ಸರಿಯಾಗಿ ಪಾವತಿಸುವುದು ರೈತರ ಜವಾಬ್ದಾರಿಯಾಗಿದ್ದು, ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಸಾಲ ನೀಡುವ ಮತ್ತು ಮರುಪಾವತಿ ಬಗ್ಗೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು,ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್ ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ  ಎಂ.ಬಿ.ಮರಿಯಣ್ಣ,ಎಂ.ಆರ್ ಸೀತಾರಾಂ, ರಾಮಕೃಷ್ಣಯ್ಯ ಮರುವೇಕೆರೆ ವಿಎಸ್ಸೆಸ್ಸೆನ್ ಕಾರ್ಯದರ್ಶಿ ಸುರೇಶ್ ಬಾಬು, ಪುರವಾರ ವಿಎಸ್ಸೆಸ್ಸೆನ್ ಕಾರ್ಯದರ್ಶಿ ಟಿವಿಎಸ್ ಮಂಜುನಾಥ್, ಮರವೇಕೆರೆ ವಿಎಸ್ಸೆಸ್ಸೆನ್ ಅಧ್ಯಕ್ಷ ಫಾಜಿಲ್ ಖಾನ್ ಡಿ.ಹೆಚ್. ನಾಗರಾಜು, ನಾಗಾರ್ಜುನ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!