ಹೋಮ ಹವನ ಪುರಾತನ ಕಾಲದಿಂದಲು ನಡೆದಿವೆ

485

Get real time updates directly on you device, subscribe now.


ಗುಬ್ಬಿ: ಲೋಕಕಲ್ಯಾಣಕ್ಕಾಗಿ ಹೋಮ ಹವನ ಮಹಾಯಾಗದಂತ ಧಾರ್ಮಿಕ ಕಾರ್ಯಕ್ರಮಗಳು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಮಹಾ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಎನ್.ಪತ್ರೆ ಮತಘಟ್ಟ ಗ್ರಾಮದ ಸಾಲಿಗ್ರಾಮೇಶ್ವರ ದೇವಾಲಯದ 6 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಲೋಕದ ಜನತೆ ಸುಖ ಸಂತೋಷವಾಗಿ ಬದುಕು ನಡೆಸಬೇಕು, ಪುರಾತನ ಕಾಲದಿಂದ ನಡೆದು ಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದೆ. ಅವೆಲ್ಲವೂ ನಮ್ಮ ಸಂಸ್ಕೃತಿ ಸಂಸ್ಕಾರಗಳಾಗಿವೆ ಎಂದು ತಿಳಿಸಿದರು.

ಶಿವ ಸಾಲಿಗ್ರಾಮೇಶ್ವರ ಮಠದ ಕಾರ್ಯದರ್ಶಿ ಗುರು ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ 22 ವರ್ಷಗಳ ಹಿಂದೆ ಯಾರೋ ಶರಣರು ರಸ್ತೆಯಲ್ಲಿಬಿಟ್ಟು ಹೋಗಿದ್ದ ಸಾಲಿಗ್ರಾಮ ಶಿವಲಿಂಗವು ಇಂದು ಹಲವು ಪವಾಡ ಮಾಡುವ ಮೂಲಕ ಶ್ರೀ ಶಿವ ಸಾಲಿ ರಾಮೇಶ್ವರನಾಗಿ ಪೂಜಿಸಿಕೊಳ್ಳುತ್ತಿದ್ದಾನೆ. ಸಾಲಿಗ್ರಾಮೇಶ್ವರ ಸ್ವಾಮಿಯು ಸದಾ ಭಕ್ತಿಯಿಂದ ಪೂಜಿಸುವವರಿಗೆ ಸಕಲವನ್ನು ಕೊಟ್ಟು ಕಾಪಾಡುತ್ತಿದ್ದಾನೆ. ವಿವಾಹವಿಲ್ಲದವರಿಗೆ ಇಲ್ಲಿ ಬಂದು ಪೂಜೆ ಸಲ್ಲಿಸಿದರೆ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ, ಮಕ್ಕಳಿಲ್ಲದವರು ಸಹ ಇಲ್ಲಿಗೆ ನಡೆದುಕೊಂಡರೆ ಸಂತಾನ ಭಾಗ್ಯವು ಸಿಗುತ್ತದೆ, ಇನ್ನೂ ಅಮಾವಾಸ್ಯೆ ಹಾಗೂ ಪೌರ್ಣಮಿಗಳಲ್ಲಿ ವಿಶೇಷ ಪೂಜೆ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರದ ಗುರು ಪರದೇಶಿಕೇಂದ್ರ ಮಹಾ ಸ್ವಾಮೀಜಿ, ಗುಲ್ಬರ್ಗ ಜಿಲ್ಲೆಯ ಶ್ರೀಕಂಠ ಶಿವಾಚಾರ್ಯ ಮಹಾ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶ ಕೇಂದ್ರ ಮಹಾ ಸ್ವಾಮೀಜಿ, ಖಾಲಿ ಮಠದ ವಿದ್ವಾನ್ ಬಸವರಾಜ ಸ್ವಾಮೀಜಿ ಇನ್ನಿತರರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!