ತುರುವೇಕೆರೆ: ತಾಲೂಕಿನ ದೊಡ್ಡೇನಹಳ್ಳಿ ಬಳಿ ದ್ವಿಚಕ್ರವಾಹನಗಳ ಮುಖಾ ಮುಖಿ ಡಿಕ್ಕಿಯಾಗಿ ತೀವ್ರತರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ತಾಲೂಕಿನ ದೊಡ್ಡೇನಹಳ್ಳಿ ನಿವಾಸಿ ಜಯರಾಮ್ ಪುತ್ರ ಅಭಿಷೇಕ್ (25) ಮೃತ ದುರ್ದೈವಿಯಾಗಿದ್ದು, ದೊಡ್ಡೇನಹಳ್ಳಿ ಬಳಿ ಬೈಕ್ ಗಳ ಮುಖಾ ಮುಖಿ ಡಿಕ್ಕಿಯಾದ ವೇಳೆ ತೀವ್ರತರ ಗಾಯಗೊಂಡಿದ್ದ ಅದೇ ಗ್ರಾಮದ ನಿಖಿಲ್ ಹಾಗೂ ಅಭಿಷೇಕ್ ಅವರಿಗೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ದೊರಕಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗೆ ಇಬ್ಬರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಭಿಷೇಕ್ ಮೃತಪಟ್ಟಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
Comments are closed.