ಅಸ್ಪಶ್ಯತೆ ವಿರುದ್ಧ ಹೋರಾಡಿದ್ದು ಅಂಬೇಡ್ಕರ್

499

Get real time updates directly on you device, subscribe now.


ತುಮಕೂರು: ಅಸಮಾನತೆ ಎಂಬ ಕೊಳಕನ್ನು ಸಮಾನತೆಯೆಂಬ ಬೆಳಕಿನಿಂದ ಹೋಗಲಾಡಿಸಬಹುದು ಎಂದು ಭಾರತದ ಜನತೆಗೆ ತಮ್ಮ ಬರಹಗಳಲ್ಲಿ ಹಾಗೂ ಭಾಷಣಗಳಲ್ಲಿ ಸಾರಿ ಹೇಳಿದವರು ಅಂಬೇಡ್ಕರ್ಎಂದು ಚಿಂತಕ ಡಾ.ರವಿಕುಮಾರ್ ನೀಹ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹಗಳಲ್ಲಿ ಅಸ್ಪಶ್ಯತೆಯ ಚಿಂತನೆಗಳು ಮತ್ತು ಸಮಕಾಲಿನತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಸ್ಪಶ್ಯತೆಯ ವಿರುದ್ಧ ಹೋರಾಟ ನಡೆಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್, ವ್ಯವಸ್ಥೆಯಿಂದ ನಿರಾಕರಿಸಲ್ಪಟ್ಟ ಸಮುದಾಯವನ್ನು ಅಂಬೇಡ್ಕರ್ಹೋರಾಟ ನಡೆಸಿ, ಸಂವಿಧಾನ ರಚಿಸಿ, ಪ್ರಜಾಪ್ರಭುತ್ವಕ್ಕೆ ಅರ್ಥ ತಂದ ಮಹಾನ್ ವ್ಯಕ್ತಿ, ಕೆಳವರ್ಗದ ಜನರಿಗೆ ದೇವಾಲಯದ ಪ್ರವೇಶ, ಸಹಪಂಕ್ತಿ ಭೋಜನ, ಕುಡಿಯುವ ನೀರು, ಅಂತರ್ಜಾತಿ ವಿವಾಹ ಇತ್ಯಾದಿಗಳನ್ನೊಳಗೊಂಡ ಸಾಮಾಜಿಕ ಮತ್ತು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದವರು ಅಂಬೇಡ್ಕರ್ ಎಂದು ತಿಳಿಸಿದರು.

ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಸುಸಜ್ಜಿತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಮಾತನಾಡಿ, ಅಂಬೇಡ್ಕರ್ ಅವರು ಸಮಾಜದ ಶಕ್ತಿ, ಏಕತೆಯ ಮತ್ತು ಸಮಗ್ರತೆಯ ತತ್ವ ಸಾರಿದವರು ಅಂಬೇಡ್ಕರ್, ನಾವೆಲ್ಲರೂ ಸಮಾನತೆಯ ಹಾದಿಯಲ್ಲಿ ಬದುಕೋಣ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗೋಣ ಎಂದರು.

ತುಮಕೂರು ವಿವಿ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಚಿಕ್ಕಣ್ಣ, ವಿವಿಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಸಂಯೋಜಕ ಡಾ.ಮಹಾಲಿಂಗ.ಕೆ.ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!