ನಟ ಉಪೇಂದ್ರ ಬಂಧನಕ್ಕೆ ಆಗ್ರಹ

2,311

Get real time updates directly on you device, subscribe now.


ತುಮಕೂರು: ದಲಿತರನ್ನು ಕೀಳಾಗಿ ಕಂಡು ತುಚ್ಚವಾಗಿ ಮಾತನಾಡಿ ಇಡೀ ದೇಶದ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಉಪೇಂದ್ರನನ್ನು ಬಂಧಿಸಿ ಗಡಿಪಾರು ಮಾಡಿ ಎಂದು ಅಂಬೇಡ್ಕರ್ ಸೇನೆ ಆಗ್ರಹಿಸಿತು.

ನಗರದ ಟೌನ್ ಹಾಲ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಅಂಬೇಡ್ಕರ್ ಸೇನೆ ವತಿಯಿಂದ ಮೆರವಣಿಗೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಸೇನೆ ಸಂಘದ ಅಧ್ಯಕ್ಷ ಕೆಂಪರಾಜು ಮಾತನಾಡಿ, ನಟ ಉಪೇಂದ್ರ ಒಬ್ಬ ದಲಿತ ವಿರೋಧಿ ಅವಹೇಳನಕಾರಿಯಾಗಿ ಮಾತನಾಡಿ ದಲಿತರನ್ನು ಕೀಳಾಗಿ ಕಂಡಿದ್ದು ನಮಗೆ ಮಾತ್ರವಲ್ಲ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೀಳಾಗಿ ಕಂಡಂತೆ, ಇಡೀ ದೇಶದ ಸಮಾನತೆಗೆ ಮೂಲ ಕಾರಣ ಅಂಬೇಡ್ಕರ್, ಇಂತಹ ಮಹಾನುಭಾವರ ದೇಶದಲ್ಲಿ ಇಂತಹ ನೀಚ ಮನೋಭಾವದ ಜನರು ಅವರನ್ನೇ ಕೀಳಾಗಿ ಕಾಣುವರು, ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರು ಮೇಲು ಕೀಳು ಮನೋಭಾವ ಮಾನವೀಯತೆ ಬದಲಾಗಲಿಲ್ಲ, ಸಾಮಾಜಿಕ ಅರಿವಿಲ್ಲದೆ ವ್ಯಕ್ತಿತ್ವ ಬೆಳೆಯಲಿಲ್ಲ, ಜಾತಿ ನಿಂದನೆ ನಿಲ್ಲಲಿಲ್ಲ, ನಟ ಉಪೇಂದ್ರ ಒಂದು ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜ್ಯಭಾರ ಮಾಡಲು ಹೊರಟಿರುವ ಈ ವ್ಯಕ್ತಿ ಇಂತಹ ಮನಸ್ಥಿತಿ ಹೊಂದಿರುವ ಇವರು ಯಾವ ದೇಶ ಉದ್ಧಾರ ಮಾಡಬಹುದು ಎಂಬ ಶಂಕೆ ನಮಗೆಲ್ಲ ಮೂಡುತ್ತದೆ ಎಂದರು.

ಅಂಬೇಡ್ಕರ್ ಸೇನೆ ಮಹಿಳಾ ಜಿಲ್ಲಾಧ್ಯಕ್ಷರಾದ ಸುಮ ಮಾತನಾಡಿ, ಸಾಮಾನ್ಯ ಜನರ ಮೇಲೆ ತೋರುವ ಕಾನೂನಿನ ದರ್ಪ ಉಪೇಂದ್ರನ ಮೇಲೆ ಏಕೆ ಪಾಲಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳುವ ಮೂಲಕ ಒಬ್ಬ ಕೀಳು ಮನೋಭಾವದ ನಟ ಇವರಿಗೆ ಭಾರತ ರತ್ನ ಬಿ.ಆರ್.ಅಂಬೇಡ್ಕರ್ ಜನಾಂಗ ಎಂದರೆ ಏಕೆ ಭೇದ, ಭಾವದಿಂದ ಕಾಣುತ್ತಾರೆ, ಅದರಲ್ಲೂ ಮಹಿಳೆಯರನ್ನು ಕಂಡರೆ ಅವರಿಗೆ ಏಕೆ ಅಸಡ್ಡೆ, ಉಪೇಂದ್ರನ ಮೇಲೆ ಪ್ರಕರಣ ದಾಖಲಿಸದೆ ಇರುವುದು ಏಕೆ? ಎಂಬುದು ಶೋಚನೀಯ ಎಂದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಸಂಘಟನೆಯು ಉಪೇಂದ್ರನ ವಿರುದ್ಧ ಘೋಷಣೆ ಕೂಗಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಉಪೇಂದ್ರನನ್ನು ಬಂಧಿಸಿ ಗಡಿಪಾರು ಮಾಡಲು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಲಕ್ಷ್ಮಿದೇವಮ್ಮ, ಗಿರಿಜಮ್ಮ, ನೇತ್ರಾವತಿ, ಭಾಗ್ಯ, ಮಹಾಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!