ತುಮಕೂರು: ಭಾರತದ ಚಂದ್ರಯಾನ-3 ಯಶಸ್ವಿಗೊಂಡ ಹಿನ್ನೆಲೆಯಲ್ಲಿ ನಗರದ ಬಾಯರ್ಸ್ ಕಾಫಿ ಆವರಣದಲ್ಲಿ ಮುಂಜಾನೆ ಬಳಗದವತಿಯಿಂದ ದೇಶದ ವಿಜ್ಞಾನಿಗಳಿಗೆ ಕೋಟಿ ಪ್ರಾಣಾಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಯರ್ಸ್ ಕಾಫಿ ಆವರಣದಲ್ಲಿ ಭಾರತದ ಧ್ವಜಾರೋಹಣ ನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಸ್ಪೂರ್ತಿ ಚಿದಾನಂದ್ ಮಾತನಾಡಿ, ಆಗಸ್ಟ್ 23 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ, ದೇಶದ ವಿಜ್ಞಾನಗಳ ನೂರಾರು ವರ್ಷದ ಕನಸು ನನಸಾದ ದಿನ, ಜೊತೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಕೈಗೂಡಿದ ದಿನ, ಹಾಗಾಗಿ ಈ ದೇಶದ ಎಲ್ಲಾ ವಿಜ್ಞಾನಿಗಳಿಗೂ ಕೋಟಿ ಪ್ರಾಣಾಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಚಂದ್ರಯಾನ-3 ಯಶಸ್ವಿನನೊಂದಿಗೆ ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ಏನು ಎಂಬುದನ್ನು ಇಡೀ ಜಗತ್ತಿಗೆ ಪರಿಚಯಿಸಲಾಗಿದೆ, ಅಲ್ಲದೆ ಭಾರತ ಇತರೆ ಎಲ್ಲಾ ದೇಶಗಳಿಗಿಂತಲೂ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದಿದೆ ಎಂಬುದನ್ನು ಸಾಧಿಸಿ ತೋರಿಸಿದ ದಿನ, ಈಗಾಗಲೇ ಚಂದ್ರನ ಮೇಲೆ ಕಾಲಿಟ್ಟಿರುವ ಚೀನಾ, ಅಮೆರಿಕಾ, ಜಪಾನ್ ದೇಶಗಳಿಗಿಂತಲೂ ಅತಿ ಕಡಿಮೆ ವೆಚ್ಚದಲ್ಲಿ ಚಂದ್ರದ ಮೇಲೆ ಭಾರತದ ಉಪಗ್ರಹ ಇಳಿಸುವ ಮೂಲಕ ಒಂದು ಹೊಸ ಸಂದೇಶವನ್ನು ಜಗತ್ತಿಗೆ ನಮ್ಮ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ನಾವು ದೇಶದ ವಿಜ್ಞಾನಿಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು ಎಂದು ಚಿದಾನಂದ್ ನುಡಿದರು.
ತುಮಕೂರಿನ ಹಳೆಯ ಹೆಚ್ಎಂಟಿ ಜಾಗದಲ್ಲಿರುವ ಇಸ್ರೋ ಕೇಂದ್ರ ಮುಂದೊಂದು ದಿನ ಇದೇ ರೀತಿಯ ಹೆಸರು ಮಾಡುವಂತಹ ಕೇಂದ್ರವಾಗಲಿ ಎಂಬ ಆಶಯ ನಮ್ಮದು, ಹಾಗೆಯೇ ವಿಶ್ವ ಚೇಸ್ ಚಾಂಪಿಯನ್ ಶಿಫ್ ನಲ್ಲಿ ರನ್ನರ್ ಅಫ್ ಆಗುವ ಮೂಲಕ 18 ವರ್ಷದ ಯುವಕ ಪ್ರಜ್ಞಾನಂದ ಸಾಧಿಸಿರುವ ವಿಜಯವನ್ನು ನಾವು ಅಭಿನಂದಿಸಲೇ ಬೇಕಾಗುತ್ತದೆ. ಮುಂದೊಂದು ವಿಶ್ವ ಚಾಂಪಿಯನ್ ಆಗಲಿ ಎಂಬು ಶು ಹಾರೈಕೆ ನಮ್ಮದು ಎಂದು ಸ್ಪೂರ್ತಿ ಚಿದಾನಂದ ನುಡಿದರು.
ಮುಂಜಾನೆ ಬಳಗದ ಕಾರ್ಯಾಧ್ಯಕ್ಷ ಹಾಗೂ ವಕೀಲ ಗೂಳೂರು ಶ್ರೀನಿವಾಸ್ ಮಾನತಾಡಿ, ಇಸ್ರೋ ವಿಜ್ಞಾನಿಗಳು ಮಾಡಿರುವ ಅದ್ವೀತಿಯ ಸಾಧನೆಯ ವಿಜಯೋತ್ಸವದ ಅಂಗವಾಗಿ ಕೋಟಿ ಪ್ರಾಣಾಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬಾಯರ್ಸ್ ಕಾಫಿಗೆ ಬರುವಂತಹ ಎಲ್ಲಾ ಗೆಳೆಯರಿಗೆ ಉಪ್ಪಿಟ್ಟು, ಕೇಸರಿ ಬಾತ್ ಸಿಹಿ ನೀಡಿ ನಮ್ಮ ದೇಶದ ವಿಜ್ಞಾನಿಗಳಿಗೆ ಶುಭಾಶಯ ತಿಳಿಸುವಂತೆ ಕೋರಿದ್ದೇವೆ, ಚಂದ್ರಯಾನ-2 ವಿಫಲಗೊಂಡಿದ್ದರೂ ಎದೆಗುಂದದೆ ಚಂದ್ರಯಾನ-3 ರೂಪಿಸಿ ನಮ್ಮದೆ ತಂತ್ರಜ್ಞಾನದಿಂದ ರೂಪಿಸಿದ ಉಡಾವಣಾ ಯಂತ್ರದ ಮೂಲಕ ನಿಗದಿತ ಕಕ್ಷೆಗೆ ಸೇರುವಂತೆ ಮಾಡಿರುವುದು ಹೆಮ್ಮೆಯ ವಿಷಯ, ಇದರ ಹಿಂದಿರುವ ಎಲ್ಲಾ ವಿಜ್ಞಾನ ತಂತ್ರಜ್ಞಾನದ ಕೈಗಳಿಗೂ ಕೋಟಿ ನಮನ ಸಲ್ಲಿಸುತ್ತೇವೆ. ಇಡೀ ವಿಶ್ವಸವೇ ಇಂದು ಭಾರತದತ್ತ ತಿರುಗಿ ನೋಡುವಂತಹ ಸ್ಥಿತಿಯನ್ನು ನಮ್ಮ ವಿಜ್ಞಾನಿಗಳು ಸೃಷ್ಟಿಸುವ ಮೂಲಕ ಭಾರತದ ಮುಕುಟಕ್ಕೆ ಕೀರಿಟ ತೊಡಿಸಿದ್ದಾರೆ ಎಂದರು.
ಈ ವೇಳೆ ಬಾಯರ್ಸ್ ಕೃಷ್ಣಮೂರ್ತಿ, ಮುಂಜಾನೆ ಬಳಗದ ಸದಸ್ಯ ಎಂ.ಕೆ.ವೆಂಕಟಸ್ವಾಮಿ, ವಕೀಲ ವೆಂಕಟಾಚಲ, ನಿವೃತ್ತ ಇಂಜಿನಿಯರ್ ಡಾ.ಗಂಗಾಧರ ಕೊಡ್ಲಿ, ಮಧು,ವಿನಯ್, ಮಹೇಶ್, ನವೀನ್, ಕ್ರೀಡಾಪಟು ಟಿ.ಕೆ.ಆನಂದ್ ಇತರರು ಇದ್ದರು.
Comments are closed.