ತುರುವೇಕೆರೆ ತಾಲ್ಲೂಕಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ

225

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ವ್ಯಾಪ್ತಿಯ ಗ್ರಾಮಗಳ ಗ್ರಾಮ ದೇವತೆಗಳ ದೇಗುಲದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.

ಶ್ರಾವಣ ಮಾಸದ ಆರಂಭದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು, ವರಮಹಾಲಕ್ಷ್ಮೀ ಕೃಪೆಗಾಗಿ ತಾಲೂಕಿನ ಬಹುತೇಕ ಮನೆಗಳಲ್ಲಿ ಮಹಾಲಕ್ಷ್ಮಿ ಪ್ರತಿಷ್ಠಾಪಿಸಿ ವಿಶೇಷವಾಗಿ ಅಲಂಕರಿಸಿ ಪೂಜಿಸುವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ವರ ಮಹಾಲಕ್ಷ್ಮಿ ಹಬ್ಬದ ಆಚರಣೆ ತರುವಾಯ ಗೌರಿ ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳ ಆಗಮನವಾಗುತ್ತದೆ.
ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ತುರುವೇಕೆರೆ ಪಟ್ಟಣದ ಅಧಿದೇವತೆ ಶ್ರೀಉಡುಸಲಮ್ಮ ದೇವತೆ, ಲಕ್ಷ್ಮೀದೇವಿ, ಕುನ್ನಾಲಮ್ಮ ದೇವಿ, ಮಾಯಸಂದ್ರ ಕೊಲ್ಲಾಪುರದಮ್ಮ ದೇವಿ ಸೇರಿದಂತೆ ಗ್ರಾಮ ದೇವತೆಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಗ್ರಾಮದ ದೇವಿ ದೇಗುಲಗಳತ್ತ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಭಕ್ತರ ದಂಡೇ ಹರಿದು ಬಂದಿತ್ತು, ಲಕ್ಷ್ಮೀ ಕೃಪೆಗಾಗಿ ಭಕ್ತರು ದೇವಿಯಲ್ಲಿ ಬೇಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

ತುರುವೇಕೆರೆ ಪಟ್ಟಣದ ಅಧಿದೇವತೆ ಶ್ರೀಉಡುಸಲಮ್ಮ ದೇವಿಯವರಿಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಾಡಲಾಗಿದ್ದ ವಿಶೇಷಾಲಂಕಾರ ಭಕ್ತರ ಗಮನ ಸೆಳೆಯಿತು, ಪಟ್ಟಣದ ಹಳೇ ಊರಿನ ಲಕ್ಷ್ಮೀ ದೇವರ ಉತ್ಸವ ಕೂಡ ಇದೇ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು, ಮುತ್ತೈದೆಯರು ಮನೆಗೆ ಮನೆಗೆ ತೆರಳಿ ಅರಿಶಿನ ಕುಂಕುಮ ಪಡೆದು ವರಮಹಾಲಕ್ಷ್ಮಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

Get real time updates directly on you device, subscribe now.

Comments are closed.

error: Content is protected !!