ತಾಯಿ ಮಹಾಲಕ್ಷ್ಮೀಗೆ ವಿಶೇಷ ಪೂಜೆ, ಅಲಂಕಾರ

ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗೊರವನಹಳ್ಳಿಗೆ ಭಕ್ತರದಂಡು

415

Get real time updates directly on you device, subscribe now.


ಕೊರಟಗೆರೆ: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ಪುಣ್ಯಕ್ಷೇತ್ರಕ್ಕೆ ಕರುನಾಡಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಲಾಡು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು,
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ತೀತಾ ಗ್ರಾಪಂ ವ್ಯಾಪ್ತಿಯ ಸುಪ್ರಸಿದ್ದ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು ತೀತಾ ಜಲಾಶಯದ ಸೊಬಗು ಕಣ್ತುಂಬಿಕೊಂಡರು.

ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನಿಂದ ದೇವಿಯ ದರ್ಶನ ಬರುವ ಭಕ್ತರಿಗೆ ಸಕಲ ವ್ಯವಸ್ಥೆ, ಸಿದ್ಧತೆ ಮಾಡಿಕೊಂಡು ಪೊಲೀಸರ ಜೊತೆಗೂಡಿ ಭದ್ರತೆ ನೀಡಿದ್ದರು.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಶ್ರೀಕ್ಷೇತ್ರದ ಸಿರಿದೇವಿಯ ಸನ್ನಿಧಾನದಲ್ಲಿ ಶುಕ್ರವಾರ ಮುಂಜಾನೆಯಿಂದ ಸಂಜೆಯ ವರೆಗೆ ಮಹಾಲಕ್ಷ್ಮೀದೇವಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಗ್ರಾಮದೇವತೆ, ಗಣ, ಮಹಾಲಕ್ಷ್ಮೀ ಹೋಮ ಸೇರಿದಂತೆ ವಿಶೇಷ ಪೂಜಾ ಕಾರ್ಯ ಜರುಗಿತು, ಗುರುವಾರದಿಂದಲೇ ದೇವಾಲಯ ಮತ್ತು ದೇವಿಗೆ ವಿಶೇಷವಾಗಿ ಹೂವು, ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಹಾಲಕ್ಷ್ಮೀ ಟ್ರಸ್ಟ್ ನಿಂದ ಏರ್ಪಡಿಸಲಾಗಿತ್ತು.

ಭಕ್ತರಿಗೆ ವಿಶೇಷ ಆಟೋ ಸೌಲಭ್ಯ
ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಹಾಲಕ್ಷ್ಮೀ ಟ್ರಸ್ಟ್ ನಿಂದ ದೇವಾಲಯಕ್ಕೆ ಉಚಿತ ಆಟೋ ವ್ಯವಸ್ಥೆ ಮಾಡಲಾಗಿತ್ತು, ಫ್ರೆಂಡ್ಸ್ ಗ್ರೂಪ್ ಸಹಕಾರದೊಂದಿಗೆ ದೇವಾಲಯದ ಸಿಬ್ಬಂದಿ ವರ್ಗ ಪ್ರಸಾದ ವಿತರಣೆ ಮಾಡಿದರು, ಮಹಾಲಕ್ಷ್ಮೀ ದೇವಾಲಯ ಮತ್ತು ದೇವಿಗೆ ಬೆಂಗಳೂರಿನ ಕೃಷ್ಣಮೂರ್ತಿ ಎಂಬುವವರು ಹೂವು ಮತ್ತು ವಿದ್ಯುತ್ ದೀಪ ಅಲಂಕಾರ ಮಾಡಿಸಿದ್ದರು, ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ ದೇವಾಲಯದ ನಾಲ್ಕು ದಿಕ್ಕಿನಲ್ಲಿ ಭದ್ರತೆ ಮಾಡಿದ್ದರು.

ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ, ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಜಿ.ವಾಸುದೇವ, ಕಾರ್ಯದರ್ಶಿ ಮುರುಳಿಕೃಷ್ಣ.ಆರ್, ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿ ಡಾ.ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜ ಅರಸ್, ಮಂಜುನಾಥ, ಓಂಕಾರೇಶ್, ಚಿಕ್ಕನರಸಯ್ಯ, ಬಾಲಕೃಷ್ಣ, ನರಸರಾಜು ಇತರರು ಮಹಾಲಕ್ಷ್ಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!