ನಿಯಮ ಬಾಹಿರ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ

751

Get real time updates directly on you device, subscribe now.


ಕುಣಿಗಲ್: ಪಟ್ಟಣದ ನ್ಯಾಯಾಲಯದ ಕಾಂಪ್ಲೆಕ್ಸ್ ಮುಂಭಾಗದ ಹೆದ್ದಾರಿಗೆ ಹೊಂದಿಕೊಂಡಿದ್ದ ನಿವೇಶನದಲ್ಲಿ ನಿಯಮಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಆರೋಪಿಸಿ ನಾಗರಿಕರೆ ಕಟ್ಟಡ ಕೆಲಸ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದಲ್ಲಿ ಹಾದುಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿ 48ರ ನ್ಯಾಯಾಲಯ ಕಾಂಪ್ಲೆಕ್ಸ್ ಮುಂಭಾಗದಲ್ಲೆ ಹೆದ್ದಾರಿಗೆ ಹೊಂದಿಕೊಂಡ ನಿವೇಶನದಲ್ಲಿ ನಿವೇಶನ ಮಾಲೀಕರು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ನಗರ ಯೋಜನಾ ಪ್ರಾಧಿಕಾರ ಅನುಮೋದಿಸಿ, ಪುರಸಭೆ ನೀಡಿರುವ ಪರವಾನಗಿ ನಿಯಮ ಉಲ್ಲಂಸಿದ್ದಾರೆಂದು ಆರೋಪಿಸಿ ನಾಗರಿಕರಾದ ಅನಿಲ್, ಸುನಿಲ್, ನರಸಿಂಹ, ಲೋಕೇಶ, ಪುರಸಭೆ ಮಾಜಿ ಸದಸ್ಯರಾದ ಚಂದ್ರಶೇಖರ್, ಗೋಪಿ ಕಟ್ಟಡ ನಿರ್ಮಾಣ ಮಾಡುವವರಿಗೆ ಕಟ್ಟಡ ರೇಖೆ ನಿಯಮ ಉಲ್ಲಂಸದಂತೆ, ಹೆದ್ದಾರಿಯಿಂದ ಸುರಕ್ಷಿತ ಅಂತರ ನಿರ್ವಹಣೆ ಮಾಡಿ ನಿಯಮ ಪಾಲನೆ ಮಾಡುವಂತೆ ಆಗ್ರಹಿಸಿದರು.

ಈ ವೇಳೆ ಕೆಲಸ ಮುಂದುವರೆಯುತ್ತಿದ್ದುದರಿಂದ ಕೆಲಸ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ಆಗ್ರಹಿಸಿದರು, ಕಾಮಗಾರಿ ಗುತ್ತಿಗೆಯನ್ನು ಪುರಸಭೆ ಸದಸ್ಯರೊಬ್ಬರು ಪಡೆದಿದ್ದು ಸ್ಥಳಕ್ಕಾಗಮಿಸಿ ಪಟ್ಟಣದಲ್ಲಿ ಎಲ್ಲೆಡೆ ಅಕ್ರಮ ನಿರ್ಮಾಣವಾಗಿದೆ. ಎಲ್ಲವನ್ನು ತೆರವುಗೊಳಿಸಿ ಎಂದು ಚರ್ಚೆಗೆ ಇಳಿದರು, ಕೆಲಕಾಲ ವಾಗ್ವಾದ ನಡೆದಿದ್ದು, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕಟ್ಟಡ ಪರವಾನಗಿಯಲ್ಲಿ ಅನುಮತಿಸಲಾಗಿರುವಂತೆ ಕಟ್ಟಡ ನಿರ್ಮಾಣ ಮಾಡುವಂತೆ, ಹೆಚ್ಚುವರಿಯಾಗಿ ಮುಂದೆ ಬಂದಿರುವ ಪ್ರದೇಶದಲ್ಲಿ ಕಾಮಗಾರಿ ತೆರವುಗೊಳಿಸುವಂತೆ ಸೂಚಿಸಿ ನಿಯಮ ಉಲ್ಲಂಸಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು, ಗುತ್ತಿಗೆದಾರರು ಕಟ್ಟಡ ರೇಖೆಯ ನಿಯಮ ಮೀರುವುದಿಲ್ಲ ಎಂದು ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!