ಬರಗೂರು: ಶಿರಾ ರೈತರಿಗೆ ಶೇಂಗಾ ಬೆಳೆ ಜೀವನಕ್ಕೆ ಆಸರೆಯಾಗಿದೆ, ಈ ಹೆಚ್ಚು ರೈತರು ಈ ಶೇಂಗಾ ಕೃಷಿ ಬೆಳೆಯನ್ನೇ ನಂಬಿ ಬದುಕುತ್ತಾರೆ, ಹುಲಿಕುಂಟೆ, ಗೌಡಗೆರೆ, ಕಸಬಾ, ಕಳ್ಳಂಬೆಳ್ಳ ಹೋಬಳಿ ಗಳ ವ್ಯಾಪ್ತಿಯ ರೈತರು ಈ ಬಾರಿ ಶೇಂಗಾ ಬಿತ್ತನೆ ಮಾಡಿದ್ದು ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ, ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಬೆಲೆ ನಷ್ಟ ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಒತ್ತಾಯ ಪಡಿಸಿದರು.
ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಗ್ರಾಮದ ಶ್ರೀ ಓಬಳ ನರಸಿಂಹ ಸ್ವಾಮಿ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ದೇವರ ಉತ್ಸವ ಮತ್ತು ಜಾತ್ರೆಗಳು ಗ್ರಾಮಗಳ ಜನರ ಪರಸ್ಪರ ಸ್ನೇಹ ಸಂಬಂಧ ಗಟ್ಟಿಗೊಳಿಸುವುದರ ಜೊತೆಗೆ ಗ್ರಾಮಗಳ ನೆಮ್ಮದಿ ಬದುಕಿಗೆ ಸಹಕಾರಿಯಾಗುತ್ತದೆ ಎಂದರು.
ಸಂಕಷ್ಟದಲ್ಲಿರುವ ರೈತರಿಗೆ ಒಳ್ಳೆಯದನ್ನು ಮಾಡಲಿ ಶಿರಾ ಕ್ಷೇತ್ರದ ಜನತೆಗೆ ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಶ್ರೀ ಓಬಳ ನರಸಿಂಹ ಸ್ವಾಮಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಮುಖಂಡರಾದ ಪೂಜಾರ್ ವೀರೇಂದ್ರ, ಪೂಜಾರ್ ರಂಗರಾಜ್ ದೇವಗೊಂಡನಹಳ್ಳಿ ಮತ್ತು ತಾಳಗುಂದ ಗ್ರಾಮದ ಓಬಳ ರಂಗಯ್ಯ, ಓಬಳ ನರಸಿಂಹಯ್ಯ ,ರಂಗಶಾಮಯ್ಯ, ನರಸಿಂಹ ಮೂರ್ತಿ, ಪೂರ್ಜಾ ಶಿವಣ್ಣ, ವೀರಪ್ಪ ನಾಯಕ, ಲಕ್ಷ್ಮಿ ರಂಗಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಈರಣ್ಣ, ಮುಖಂಡರಾದ ಸತೀಶ್, ನಾಗರಾಜ್, ಶಿಕ್ಷಕ ವಾಸಣ್ಣ, ಗೊಲ್ಲ ಗೌಡ್ರು, ನರಸಿಂಹಮೂರ್ತಿ ಇತರರು ಹಾಜರಿದ್ದರು.
Comments are closed.