ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

593

Get real time updates directly on you device, subscribe now.


ಗುಬ್ಬಿ: ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ 4ನೇ ದರ್ಜೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣ್ ಬಿಡುಗಡೆ ಮಾಡಿದರು.

4ನೇ ದರ್ಜೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಿದ್ದು ಸಂಘದ ಅಧ್ಯಕ್ಷರಾಗಿ ಆರ್.ಭರತ್ ಭೂಷಣ್ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣ್ ಘೋಷಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣ್ ಮಾತನಾಡಿ, ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ 4ನೇ ದರ್ಜೆಯ ಸರ್ಕಾರಿ ನೌಕರರ ಸಂಘ ಸ್ಥಾಪಿಸಿ 25 ವರ್ಷ ಕಳೆದಿದ್ದರೂ ಅದನ್ನು ಕಾರ್ಯ ಚಟುವಟಿಕೆ ತರುವಲ್ಲಿ ಸಾಧ್ಯವಾಗದೆ ಕ್ಷಿಣಿಸಿದ್ದು, ಆದರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಂದಾಣಿಕೆಯಾಗುವ ಮೂಲಕ ಇದೀಗ 4ನೇ ದರ್ಜೆಯ ನೌಕರರ ಸಂಘ ಮರು ರಚನೆ ಮಾಡಲಾಗಿದೆ, 4ನೇ ದರ್ಜೆಯ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಟಿ.ಯು.ಕೃಷ್ಣಮೂರ್ತಿ, ಅಧ್ಯಕ್ಷರಾಗಿ ಆರ್.ಭರತ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಟಿ.ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಲೋಕೇಶ್, ಸುನಿಲ್, ಪ್ರಕಾಶ್, ಕಾರ್ಯದರ್ಶಿಯಾಗಿ ಶಶಿಕುಮಾರ್, ಖಚಾಂಚಿಯಾಗಿ ಭರತ್ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

4ನೇ ದರ್ಜೆಯ ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷ ಭರತ್ ಭೂಷಣ್ ಮಾತನಾಡಿ, ತಾಲೂಕಿನಲ್ಲಿ 150ಕ್ಕೂ ಹೆಚ್ಚು 4ನೇ ದರ್ಜೆ ಸರ್ಕಾರಿ ನೌಕರರು ವಿವಿಧ ಇಲಾಖೆಯಲ್ಲಿದ್ದು, ನೌಕರರ ಸಂಕಷ್ಟ, ಸಮಸ್ಯೆ ಹಂಚಿಕೊಳ್ಳಲು ಸಾಧ್ಯವಾಗದೆ ಇದ್ದ ಕಾರಣ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಂಘವಾಗಿದ್ದ ನಮ್ಮ ಸಂಘವು ವಿಲೀನವಾಗಿದ್ದು ಜಿಲ್ಲೆಯಲ್ಲಿಯೂ ಜಿಲ್ಲಾ ಸಮಿತಿ ರಚನೆಯಾಗಿದೆ, ಇದೀಗ ಗುಬ್ಬಿ ತಾಲೂಕಿನಲ್ಲಿಯೂ 4ನೇ ದರ್ಜೆಯ ನೌಕರರ ಸಂಘದ ಪದಾಧಿಕಾರಿಗಳ ರಚನೆ ಮಾಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ನೌಕರರ ಜೊತೆಗೂಡಿ ಮಾದರಿ ತಾಲೂಕು ಘಟಕ ಮಾಡುವ ಮೂಲಕ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ಅವರೊಂದಿಗೆ ನಾವಿದ್ದೇವೆ ಎಂಬ ಅಭಯದ ಭರವಸೆ ನೀಡುತ್ತಾ ಇರುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 28 ವಿವಿಧ ಸ್ತರದ ಇಲಾಖೆಗಳು ಸಂಘದ ಅಡಿಯಲ್ಲಿ ಸಮಿತಿ ರಚಿಸಿ ನೌಕರರ ಸಂಘ ಸ್ಥಾಪಿಸಲಾಗಿದೆ ಎಂದರು.

ಸಭೆಯಲ್ಲಿ ನೂತನ ಗೌರವಾಧ್ಯಕ್ಷ ಕೆ.ಟಿ.ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಕುಮಾರ್, ಖಚಾಂಚಿ ಸುನಿಲ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!