ಪರಿಸರ ವಿರೋಧಿ ಗೌರಿ ಗಣೇಶ ನಿಷೇಧಿಸಿ

371

Get real time updates directly on you device, subscribe now.


ಕುಣಿಗಲ್: ಗೌರಿ ಗಣೇಶ ಹಬ್ಬಾಚರಣೆ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪರಿಸರ ವಿರೋಧಿ ಗೌರಿ ಗಣೇಶ ಮೂರ್ತಿ ಮಾರಾಟ ನಿಷೇಧಿಸುವಂತೆ ತಾಲೂಕು ಕುಂಬಾರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.

ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಅವರಿಗೆ ಪುರಸಭೆ ಸದಸ್ಯರೊಂದಿಗೆ ತೆರಳಿ ಮನವಿ ಸಲ್ಲಿಸಿದ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ತಾಲೂಕು ಸೇರಿದಂತೆ ವಿವಿಧೆಡೆಗಳಲ್ಲಿ ಪಾರಂಪರಿಕ ಕುಂಬಾರ ವೃತ್ತಿಯನ್ನೆ ಅವಲಂಬಿಸಿರುವ ನೂರಾರು ಕುಟುಂಬಗಳು ಗೌರಿ- ಗಣೇಶ ಹಬ್ಬಕ್ಕೆ ಮುಂಚಿನ ಹಲವಾರು ತಿಂಗಳ ಮುಂಚೆಯೇ ಕೆರೆಯಿಂದ ಜೇಡಿ ಮಣ್ಣು ತಂದು ಕೆರೆಯಲ್ಲಿ ಹೂಳು ತುಂಬಿದ ಜೇಡಿ ಮಣ್ಣು ಎತ್ತುವಳಿ ಮಾಡುವ ಮೂಲಕ ಕೆರೆಯಲ್ಲಿ ಮತ್ತಷ್ಟು ಹೆಚ್ಚಿನ ಜಲಸಂಪನ್ಮೂಲ ತುಂಬಲು ಸಹಕಾರಿಯಾಗುತ್ತದೆ, ಕೆರೆಯಿಂದ ತಂದಂತಹ ಜೇಡಿ ಮಣ್ಣಿನಿಂದ ಪರಿಸರಕ್ಕೆ ಪೂರಕವಾದ ಗೌರಿ ಗಣೇಶ ಮೂರ್ತಿ ತಯಾರಿಸುತ್ತಾರೆ,

ಹಲವು ತಿಂಗಳ ಕಾಲ ಇಡಿ ಕುಟುಂಬಗಳು ಪಾರಂಪರಿಕ ಕಲೆ ನಂಬಿಕೊಂಡು ಗೌರಿಗಣೇಶ ಮೂರ್ತಿ ತಯಾರಿಸಿ ಹಬ್ಬದ ಮುನ್ನ ದಿನಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಸ್, ಪೇಪರ್ ಸೇರಿದಂತೆ ರಾಸಾಯನಿಕ ಮಿಶ್ರಣದಿಂದ ಮಾಡಿದ ಪರಿಸರಕ್ಕೆ ಮಾರಕವಾದ ಗೌರಿಗಣೇಶ ಮೂರ್ತಿಗಳ ಮಾರಾಟದಿಂದ ಪಾರಂಪರಿಕ ಕುಂಬಾರ ವೃತ್ತಿ ಅವಲಂಬಿಸಿದ ಕುಟುಂಬಗಳು ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ ಧಕ್ಕೆಯಾಗುವ ಜೊತೆಯಲ್ಲಿ ಪರಿಸರಕ್ಕೂ ಹಾನಿಯಾಗಲಿದೆ, ಈ ನಿಟ್ಟಿನಲ್ಲಿ ಪರಿಸರಕ್ಕೆ ಮಾರಕವಾದ ಗೌರಿ ಗಣೇಶ ಮೂರ್ತಿ ನಿಷೇಧಿಸಿ ಪರಿಸರ ಸ್ನೇಹಿ ಗೌರಿಗಣೇಶ ಮೂರ್ತಿ ಮಾರಾಟಕ್ಕೆ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಪುರಸಭೆ ಸದಸ್ಯರಾದ ಶ್ರೀನಿವಾಸ, ದೇವರಾಜು, ಪ್ರಮುಖರಾದ ಅಜಂ, ಕೃಷ್ಣಪ್ಪ, ಕುಂಬಾರ ಸಂಘದ ತಾಲೂಕು ಪದಾಧಿಕಾರಿಗಳಾದ ದಿಲೀಪ್ ಕುಮಾರ, ರೇಣುಕಯ್ಯ, ಪವಿತ್ರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!