ಕಟ್ಟಡ ಕಾಮಗಾರಿ ಕಳಪೆ- ಮುಖಂಡರ ಆಕ್ರೋಶ

473

Get real time updates directly on you device, subscribe now.


ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಗ್ರಂಥಾಲಯ ಕಟ್ಟಡ ಸೇರಿದಂತೆ ಆವರಣ ಗೋಡೆ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲ ಎಂದು ಸಾರ್ವಜನಿಕರ ದೂರಿನ ಮೇರೆಗೆ ಮುಖಂಡರು ತೆರಳಿ ಕೆಲಸ ನಿಲ್ಲಿಸಿದ ಘಟನೆ ಬುಧವಾರ ನಡೆಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಅಂದಾಜು ಆರು ಕೋಟಿ ರೂ. ವೆಚ್ಚದಲ್ಲಿ ಆವರಣ ಗೋಡೆ, ಗ್ರಂಥಾಲಯ ಸೇರಿದಂತೆ ಕಂಪ್ಯೂಟರ್ ಕೊಠಡಿ ಕಾಮಗಾರಿ ನಡೆಯುತ್ತಿದೆ, ಸದರಿ ಕಾಮಗಾರಿ ನಿಯಮಾನುಸಾರ ನಡೆಯದೆ ಕಟ್ಟಡದ ಕಾಮಗಾರಿ ಗುಣಮಟ್ಟ ಸೇರಿದಂತೆ ಕಟ್ಟಡ, ಆವರಣ ಗೋಡೆ ನಿರ್ಮಿಸಿ ಕೆಲವು ದಿನಗಳೆ ಕಳೆದರೂ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿ ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಸಾರ್ವಜನಿಕರು ವ್ಯಾಪಕವಾಗಿ ದೂರಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಪುರಸಭೆ ಸದಸ್ಯ ಶ್ರೀನಿವಾಸ್ ಇತರರು ಕಾಮಗಾರಿ ಸ್ಥಳಕ್ಕಾಗಮಿಸಿ ಬರಿ ಕೈಯಿಂದಲೆ ಕಾಮಗಾರಿ ನಡೆಸಿದ್ದ ಆವರಣ ಗೋಡೆಯ ಇಟ್ಟಿಗೆ ಎಳೆದರು, ಕಾಮಗಾರಿ ಗುಣಮಟ್ಟದ ಬಗ್ಗೆ ಕೆಲಸ ನಿರ್ವಹಿಸುತ್ತಿದ್ದ ಮೇಸ್ತ್ರಿಯನ್ನು ಪ್ರಶ್ನಿಸಿದಾಗ ಉತ್ತರಿಸದೆ ಕಾಲಿಗೆ ಬುದ್ಧಿ ಹೇಳಿದರು, ಇತರೆ ಕಾರ್ಮಿಕರಿಗೂ ಕೆಲಸ ನಿಲ್ಲಿಸುವಂತೆ ಹೇಳಿದರಲ್ಲದೆ ಕಾಮಗಾರಿ ಗುಣಮಟ್ಟ ಸರಿಯಾಗಿ ಇಲ್ಲದೆ ಇದ್ದರೂ ಇದನ್ನು ಪ್ರಶ್ನಿಸದ ಕಾಲೇಜಿನ ಪ್ರಾಚಾರ್ಯರನ್ನು ಸ್ಥಳಕ್ಕೆ ಕರೆಯಿಸಿ ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಉತ್ತರಿಸಿದ ಪ್ರಾಚಾರ್ಯರು ಕಟ್ಟಡ ನಿರ್ವಹಣೆ ನಿಟ್ಟಿನಲ್ಲಿ ಬೇರೊಬ್ಬ ಉಪನ್ಯಾಸಕರಿಗೆ ಸೂಚಿಸಿದ್ದು ಅವರನ್ನು ಸಂಪರ್ಕಿಸುವಂತೆ ಉತ್ತರಿಸಿದರು, ಇದಕ್ಕೆ ಆಕ್ಷೇಪಿಸಿದ ಮುಖಂಡರು, ಆರು ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ, ಕಂಡೂ ಕಾಣದಂತೆ ಸುಮ್ಮನಿದ್ದೀರಾ, ಆವರಣ ಗೋಡೆ ನಿರ್ಮಾಣ ಹಂತದಲ್ಲೆ ವಾಲಿದೆ, ಕಟ್ಟಡ ಕಾಮಗಾರಿ ನೋಡಿದರೆ ಬಹುತೇಕ ಕಡೆ ಸಮರ್ಪಕವಾಗಿಲ್ಲ, ದಿನಾಲೂ ಕಾಲೇಜಿಗೆ ಬರುವ ನೀವು ಈ ಕಡೆ ಸ್ವಲ್ಪ ಗಮನ ಹರಿಸಿ ಲೋಪದ ಬಗ್ಗೆ ಶಾಸಕರು ಸೇರಿದಂತೆ ಇಲಾಖೆಯ ಹಿರಿಯಾಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ, ನಿಮ್ಮ ಮನೆ ಕಾಮಗಾರಿಯಾಗಿದ್ದರೆ ಹೀಗೆ ಮಾಡುತ್ತಿದ್ರಾ ಎಂದು ಪ್ರಶ್ನಿಸಿದಾಗ ಉತ್ತರಿಸಲು ಪ್ರಾಚಾರ್ಯರು ತಡಬಡಾಯಿಸಿದರು.

ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ ಸದರಿ ಕಳಕೆ ಕಾಮಗಾರಿ ವಿಷಯವನ್ನು ಶಾಸಕರ ಗಮನಕ್ಕೆ ತಂದು ಕಟ್ಟಡದ ಗುಣಮಟ್ಟದ ಬಗ್ಗೆ ಬೇರೊಂದು ಇಲಾಖೆಯಿಂದ ತಪಾಸಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸುವುದಾಗಿ ಹೇಳಿದರು.

Get real time updates directly on you device, subscribe now.

Comments are closed.

error: Content is protected !!