ಮಧುಗಿರಿ: ಕುಟುಂಬದ ಅಗತ್ಯತೆಗಳ ಖರೀದಿಗೆ ಗೃಹ ಲಕ್ಷ್ಮಿ ಯೋಜನೆಗೆ ಸಹಕಾರಿಯಾಗಲಿದೆ ಎಂದು ಉಪ ವಿಭಾಗಾಧಿಕಾರಿ ರಿಷಿ ಆನಂದ್ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯಿರುವ ಶಾದಿ ಮಹಲ್ನಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರ ಮಹಿಳೆಯರನ್ನು ಆರ್ಥಿಕ ವಾಗಿ ಸಧೃಢಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾರ್ಯಕ್ರಮ ಜಾರಿ ಮಾಡಲಾಗಿದ್ದು ಪ್ರತಿ ಕುಟುಂಬಕ್ಕೆ ಪೂರಕ ಸೌಲಭ್ಯಗಳನ್ನು ನೀಡುವುದರ ಜೊತೆಯಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಾಗಿದೆ, ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಮಿತವಾಗಿ ಬಳಸುವಂತೆ ಕರೆ ನೀಡಿದರು.
ತಹಸೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ ರಾಜ್ಯದಲ್ಲಿ 1ಕೋಟಿ 36 ಲಕ್ಷ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿ ಕೊಂಡಿದ್ದಾರೆ, ತಾಲೂಕಿನಲ್ಲಿ 63 ಸಾವಿರ ಮಹಿಳೆಯರಿದ್ದು 56 ಸಾವಿರ ನೋಂದಾಯಿಸಿಕೊಂಡಿದ್ದಾರೆ, ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಿಡಿಪಿಓ ಅನಿತಾ ಮಾತನಾಡಿ ಐದು ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯು ಒಂದಾಗಿದ್ದು, ಗೃಹಲಕ್ಷ್ಮಿ ಯೋಜನೆ, ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ, ಮಹಿಳೆಯರು ಇಂದು ಕುಟುಂಬದ ಯಜಮಾನಿಗಳಾಗಿದ್ದು ಕುಟುಂಬಕ್ಕೆ ಅವಶ್ಯಕ ವಸ್ತುಗಳ ಖರೀದಿಗೆ ಸಹಕಾರಿಯಾಗಲಿದೆ, ಸಂಪ್ರದಾಯದಂತೆ ಅಣ್ಣ ತಮ್ಮಂದಿರು ಹಬ್ಬಗಳಿಗೆ ನೀಡುತ್ತಿದ್ದ ಕೊಡುಗೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಹೆಣ್ಣು ಮಕ್ಕಳಿಗೆ ಗೌರಿ ಗಣೇಶ ಹಬ್ಬಕ್ಕೂ ಮುನ್ನಾ ರಾಜ್ಯದ ಮಹಿಳೆಯರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಈ ಕೊಡುಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದರು.
ಪ್ರತಿಯೊಬ್ಬ ಮಹಿಳಾ ಯಜಮಾನಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ತಲುಪಲಿದೆ, ಯೋಜನೆ ಮಹಿಳೆಯರಿಗೆ ಹೆಚ್ಚು ಶಕ್ತಿ ತುಂಬುತ್ತದೆ, ಮಹಿಳೆಯರು ಈ ಯೋಜನೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರಿನ ಮಹರಾಜ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ನೇರ ಪ್ರಸಾರವನ್ನು ನೂರಾರು ಸ್ಥಳದಲ್ಲಿ ಕುಳಿತು ವೀಕ್ಷಿಸಿದರು.
ಮುಖ್ಯಾಧಿಕಾರಿ ನಜ್ಮಾ, ಪುರಸಭಾ ಸದಸ್ಯ ಆಲೀಂ ಸಾದಿಕ್, ನೋಡಲ್ ಅಧಿಕಾರಿ ವಸಂತಕುಮಾರಿ, ಮೇಲ್ವಿಚಾರಕಿ ನೇತ್ರಾವತಿ ಇಲಾಖಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆರು, ಮಹಿಳೆಯರು ಹಾಜರಿದ್ದರು.
Comments are closed.