ಶಾಲೆಯ ಅಭಿವೃದ್ಧಿಗೆ ಒತ್ತು ನೀಡುವೆ: ಎಂವಿವಿ

235

Get real time updates directly on you device, subscribe now.

ಕೊಡಿಗೇನಹಳ್ಳಿ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1 ಸಾವಿರ ಕೋಟಿ ಅನುದಾನ ತಂದಿದ್ದೆ, ಸರಕಾರ ಹೋದ ನಂತರ ಬಿಜೆಪಿ ಸರಕಾರ ಅನುದಾನ ಹಿಂಪಡೆದ ಕಾರಣ ಅನುದಾನ ಕೊರತೆ ಎದುರಾಗಿದೆ ಎಂದು ಶಾಸಕ ಎಂ.ವಿ.ವೀರ‘ದ್ರಯ್ಯ ಕಳವಳ ವ್ಯಕ್ತಪಡಿಸಿದರು.

ಹೋಬಳಿಯ ಎಂ ಹೊಸಹಳ್ಳಿಯಲ್ಲಿ ಗರಡಿ ಮನೆ ಮತ್ತು ಬಯಲು ರಂಗಮಂದಿರ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದ ಯುವಕರು ಸರಕಾರಿ ಶಾಲೆಯಲ್ಲಿ ಕೊಠಡಿಗಳಿಲ್ಲದೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಮನವಿ ಮಾಡಿದಾಗ ಬಯಲು ಮಂದಿರ ನಿರ್ಮಾಣ ಮಾಡುವ ಬದಲು ಸರಕಾರಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಹಾಲಿ ಬಿಜೆಪಿ ಸರಕಾರ ಏನೆಲ್ಲಾ ಮಾಡುತ್ತಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ, ಸರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ, 30 ವರ್ಷ ಸರಕಾರಿ ಸೇವೆ ಸಲ್ಲಿಸಿದ್ದ ಕಾರಣ ಅಧಿಕಾರಿಗಳ ಪರಿಚಯ ಇರುವ ಕಾರಣ ಅವರ ಮೂಲಕ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ, ಯಾವುದೆ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಇಂಜಿನಿಯರ್‌ಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮೈದನಹಳ್ಳಿಯಲ್ಲಿ ಭೂತರಾಯ ಸ್ವಾಮಿ ದೇವಾಯಲಯದ ಜೀರ್ಣೋದ್ಧಾರ ಹಾಗೂ ಅಡವಿ ನಾಗೇನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಹಿರಿಯ ಮುಖಂಡ ತಾಡಿ ನರಸಿಂಹಯ್ಯ ಮಾತನಾಡಿ, ಈ ಗ್ರಾಮಗಳಲ್ಲಿ 1 ರಿಂದ 5ನೇ ತರಗತಿ ವರೆಗೆ ಮಾತ್ರ ಶಾಲೆಗಳಿದ್ದು ಉನ್ನತ ವ್ಯಾಸಂಗ ಕೊಡಿಗೇನಹಳ್ಳಿ ಮಧುಗಿರಿಗೆ ತೆರಳಬೇಕು, ಯಾವುದೇ ಬಸ್ ಸೌಕರ್ಯವಿಲ್ಲ, ತುರ್ತಾಗಿ ಕೋಡಲ್ಲಾಪುರ, ಕಾಳೇನಹಳ್ಳಿ ಮೂಲಕ ಕೊಡಿಗೇನಹಳ್ಳಿ ಸರಕಾರಿ ಬಸ್ ಸೌಕರ್ಯ ಕಲ್ಪಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಕಾಯಕ್ರಮದಲ್ಲಿ ಕೆಆರ್‌ಐಡಿಎಲ್ ಇಂಜಿನಿಯರ್, ಹನುಮಂತರಾಯಪ್ಪ, ಜಿಪಂ ಎಇಇ ಸುರೇಶ್ ರೆಡ್ಡಿ, ಪಿಡಿಓ ಧನಂಜಯ್ಯ, ಗ್ರಾಪಂ ಸದಸ್ಯರಾದ ಅಂಬರೀಶ್, ಸೈಯದ್ ಗೌಸ್, ಮಾಜಿ ಅಧ್ಯಕ್ಷ ಜಗನ್ನಾಥ್, ಮಾಜಿ ಸದಸ್ಯ ರಾಮಕೃಷ್ಣಪ್ಪ, ಮೈಲಾರಿ, ಸೈಯದ್ ನಾಸೀರ್, ಡೇರಿ ನಿದೇರ್ಶಕ ಎಸ್.ಆರ್.ನಾಗರಾಜು, ಮುಖಂಡ ಪಿ.ನರಸಿಂಹರೆಡ್ಡಿ, ಬಾಸ್ಕರ್ ರೆಡ್ಡಿ, ಅಂಜು ಜಬೀಉಲ್ಲಾ, ಹೆಚ್.ಎಂ.ಹನುಮಂತರಾಜು, ಗುಂಡಗಲ್ಲು ಜೈರಾಮ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!