ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಸ್ಪರ್ಧೆ

344

Get real time updates directly on you device, subscribe now.


ತುಮಕೂರು: ತುಮಕೂರಿನ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಜನ ಕಲ್ಯಾಣ ಟ್ರಸ್ಟ್, ಸಂಸ್ಕಾರ ಭಾರತಿ, ರಾಷ್ಟ್ರೀಯ ಮಾನವ- ಪರಿಸರ ಸಂರಕ್ಷಣಾ ಪಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ 37ನೇ ಶ್ರೀಕೃಷ್ಣ ವೇಷ ಸ್ಪರ್ಧೆ ಸೆಪ್ಟೆಂಬರ್ 10 ರಂದು ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದು, ಇದರ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರ ಮಕ್ಕಳಿಗಾಗಿ ಮೂರು ಹಂತದಲ್ಲಿ ಭಗವದ್ಗೀತೆ ಕಂಠಪಾಠ, ದೇವರ ನಾಮ, ಚಿತ್ರಕಲಾ, ರಸಪ್ರಶ್ನೆ, ಏಕಪಾತ್ರಾಭಿನಯ, ಜನಪದ ಗೀತೆ, ಭಜನಾ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಸೆಪ್ಟೆಂಬರ್ 2ರ ಶನಿವಾರ ಮತ್ತು ಸೆಪ್ಟೆಂಬರ್ 3ರ ಭಾನುವಾರ ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಲಾಗಿದೆ, 4 ವರ್ಷ ಒಳಗಿನ ಮಕ್ಕಳು, 5 ರಿಂದ 7 ವರ್ಷದ ವರೆಗಿನ ಮಕ್ಕಳು ಹಾಗೂ 8 ರಿಂದ 10 ವರ್ಷದ ವರೆಗಿನ ಹೀಗೆ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸೆಪ್ಟೆಂಬರ್ 10 ರಂದು ಶ್ರೀಕೃಷ್ಣ ವೇಷ ಸ್ಪರ್ಧೆ ಬಾಲಕೃಷ್ಣ ಮತ್ತು ಕಿಶೋರ, ಕೃಷ್ಣ ಎಂಬ ಮೂರು ಹಂತದಲ್ಲಿ ನಡೆಯಲಿದೆ, ಅಲ್ಲದೆ ದೊಡ್ಡವರಿಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಶ್ರೀಕೃಷ್ಣ ವೇಷದಾರಿ ಮಕ್ಕಳಿಗೆ ಮರಳಿನಲ್ಲಿ ವಿಗ್ರಹ ಹುಡುಕುವ ಸ್ಪರ್ಧೆ ಹಮ್ಮಿಕೊಳ್ಳ ಲಾಗಿದೆ ಎಂದರು.

ತುಮಕೂರಿನ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಶಂಕರ್ ಮೂರ್ತಿ ಮಾತನಾಡಿ, ಕಳೆದ 36 ವರ್ಷಗಳಿಂದಲೂ ನಿರಂತರವಾಗಿ ಮಕ್ಕಳಲ್ಲಿ ನೈತಿಕ ಮೌಲ್ಯ ಮತ್ತು ಸಂಸ್ಕಾರ ತುಂಬುವ ಸಲುವಾಗಿ ಶ್ರೀಕೃಷ್ಣ ವೇಷ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದೆ, ಕಳೆದ ವರ್ಷ 1108 ಮಕ್ಕಳು ಸ್ಪರ್ಧೆ ಮಾಡಿದ್ದರು, ಈ ಬಾರಿ ಅದಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ, ಸೆಪ್ಟಂಬರ್ 10 ರಂದು ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸ್ಟೆಪ್ಟಂಬರ್ 2-3 ರಂದು ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಅಂದಿನ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಸೆಪ್ಟಂಬರ್ 10ರ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷ ವಿಷ್ಣವರ್ಧನ್, ವಿಶ್ವಾಸ್ ಜ್ಯೂಯಲರ್ ಮಾಲೀಕ ಡಾ.ವಿಶ್ವಾಸ್.ಟಿ.ಜಿ ಹಾಗೂ ಶ್ರೀಸಿದ್ದಗಂಗಾ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ರಾಮಕೃಷ್ಣ ಅವರು ಭಾಗವಹಿಸಲಿದ್ದಾರೆ, ಬಹುಮಾನದ ಜೊತೆಗೆ ಭಾಗವಹಿಸುವ ಎಲ್ಲರಿಗೂ ಪ್ರಸಂಶನಾ ಪತ್ರ ನೀಡಲಾಗುವುದು, ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಯಶಂಕರ ಮೂರ್ತಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಗೌರವಾಧ್ಯಕ್ಷ ಸಂದೀಪ್ ಗೌಡ, ಪ್ರಧಾನ ಕಾರ್ಯದರ್ಶಿ ರೇಖಾ ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!