ವಿವೇಕಾನಂದ ಶೂಟಿಂಗ್ ಅಕಾಡೆಮಿ ಕ್ರೀಡಾಪಟುಗಳ ಸಾಧನೆ

338

Get real time updates directly on you device, subscribe now.


ತುಮಕೂರು: ಕಳೆದ ಆಗಸ್ಟ್ 18 ರಿಂದ 22ನೇ ತಾರೀಕಿನ ವರೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ದಕ್ಷಿಣ ಭಾರತ ವಲಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿಯ 22 ಕ್ರೀಡಾಪಟುಗಳು ಭಾಗವಹಿಸಿದ್ದು, 2 ಚಿನ್ನದ ಪದಕ, ಒಂದು ಕಂಚಿನ ಪದಕ ಪಡೆಯುವುದರೊಂದಿಗೆ 8 ಕ್ರೀಡಾಪುಟುಗಳು ಮುಂದಿನ ಡಿಸೆಂಬರ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ದಕ್ಷಿಣ ಭಾರತ ವಲಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಫ್ನಲ್ಲಿ 2 ಚಿನ್ನದಪದಕ ವಿಜೇತರಾದ ಕಿರಣ್ ನಂದನ್ ಮತ್ತು ಕಂಚಿನ ಪದಕ ವಿಜೇತರಾದ ನಿತೀನ್ ಹಾಗೂ ರಾಷ್ಟ್ರಮಟ್ಟಕ್ಕೆ ಆರ್ಹತೆ ಪಡೆದ ತನ್ಮಯಿಗೌಡ, ಆದಿಲ್ ಗೌಡ, ವಿಜಯೇಂದ್ರ, ಚಿನ್ಮಯಿ, ಕೃಷ್ಣ, ರಕ್ಷಿತ್ರಾಜ್, ಚಿರಾಯು, ಹರ್ಷ ಅವರುಗಳನ್ನು ಇಂದು ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಭಿನಂದಿಸಲಾಯಿತು.

ಪದಕ ವಿಜೇತರು ಹಾಗೂ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದ 8 ಜನ ಶೂಟಿಂಗ್ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ,ಶೂಟಿಂಗ್ ಇಂದು ಹೆಚ್ಚು ಸದ್ದು ಮಾಡುತ್ತಿರುವ ಕ್ರೀಡೆಯಾಗಿದೆ.ಮಹಾನಗರಗಳಿಗೆ ಸಿಮೀತವಾಗಿದ್ದ ಶೂಟಿಂಗ್ ಸ್ಪರ್ಧೆಯನ್ನು ವಿವೇಕಾನಂದ ಸ್ಟೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ನ ಅನಿಲ್ ತುಮಕೂರಿನಲ್ಲಿ ಶೂಟಿಂಗ್ ಆಕಾಡೆಮಿ ಆರಂಭಿಸಿ,ಕ್ರೀಡಾಪಟುಗಳಿಗೆ ಅವರ ಇತಿಮಿತಿಯಲ್ಲಿಯೇ ತರಬೇತಿ ನೀಡಿ,ಇದುವರೆಗೂ ಸುಮಾರು 28 ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ,ವಿವಿಧ ಪದಕಗಳನ್ನು ತರುವಂತೆ ಮಾಡಿದ್ದಾರೆ, ಅವರನ್ನು ಪ್ರೋತ್ಸಾಹಿಸುವ ಜೊತೆಗೆ, ಜಿಲ್ಲಾಡಳಿತ,ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ,ನೂತನ ಮಹಾತ್ಮಗಾಂಧಿ ಕ್ರೀಡಾಂಗಣದ ಕ್ರೀಡಾ ಸಮುಚ್ಚಯದಲ್ಲಿ ರಿಯಾಯಿತಿ ದರದಲ್ಲಿ ಕೊಠಡಿ ನೀಡಿ ಅಭ್ಯಾಸಕ್ಕೆ ಅವಕಾಶ ಕಲ್ಪಿಸಿದರೆ ಮತ್ತಷ್ಟು ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಸೇನೆಯ ಅಧ್ಯಕ್ಷ ಹಾಗೂ ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ಮಾತನಾಡಿ, ತುಮಕೂರು ಕಲೆ, ಸಂಗೀತ, ಸಾಹಿತ್ಯ, ಶಿಕ್ಷಣದಲ್ಲಿ ಮುಂದಿರುವ ರೀತಿಯಲ್ಲಿಯೇ ಕ್ರೀಡೆಯಲ್ಲಿಯೂ ಸಾಧನೆಯಡೆಗೆ ದಾಪುಗಾಲು ಹಾಕುತ್ತಿದೆ, ಕಬ್ಬಡಿ, ಫುಟ್ಬಾಲ್, ಖೋಖೋ ನಂತಹ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತುಮಕೂರು ಹೆಸರು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಶೂಟಿಂಗ್ನಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿ ಎತ್ತರಕ್ಕೆ ಬೆಳೆಯುತ್ತಿದ್ದು, ಇದರ ಹಿಂದಿನ ಶಕ್ತಿ ತರಬೇತುದಾರರಾದ ಅನಿಲ್ ಕಡು ಬಡವರ ಮಕ್ಕಳು ಇವರ ಶೂಟಿಂಗ್ ಅಕಾಡೆಮಿ ಸೇರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ, ಜಿಲ್ಲಾಡಳಿತ, ಕ್ರೀಡಾ ಇಲಾಖೆ ಕ್ರೀಡಾ ಸಮುಚ್ಚಯವನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಇಂತಹ ಅಕಾಡೆಮಿಗೂ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದರು.

ಸುಮಾರು 65 ಕೋಟಿ ರೂ ವೆಚ್ಚ ಮಾಡಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ, ಆದರೆ ಇಂಟರ್ ನ್ಯಾಷನಲ್ ಸ್ಟಾಡರ್ಡ್ಗೆ ತಕ್ಕನಾಗಿ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಕ್ರೀಡಾಂಗಣದ ನಿರ್ವಹಣೆ ವಹಿಸಿಕೊಳ್ಳಲು ಹಿಂದು ಮುಂದು ನೋಡುತ್ತಿರುವ ಪರಿಣಾಮ ಕ್ರೀಡಾಪಟುಗಳಿಗೆ ಶೌಚಾಲಯವಿಲ್ಲ, ಬೆಳಕಿನ ವ್ಯವಸ್ಥೆ ಇಲ್ಲದಂತಾಗಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಕ್ರೀಡಾ ಇಲಾಖೆ ಗಮಹರಿಸಿ, ಕ್ರೀಡಾಪಟುಗಳಿಗೆ ಆಗುತ್ತಿರುವ ತೊಂದರೆ ಸರಿಪಡಿಸಲಿ ಎಂದು ಧನಿಯಕುಮಾರ್ ಆಗ್ರಹಿಸಿದರು.

ಈ ವೇಳೆ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ನ ಅನಿಲ್,ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ತರಬೇತುದಾರ ಇಸ್ಮಾಯಿಲ್, ಹೊಸಕೋಟೆ ನಟರಾಜು ಸೇರಿದಂತೆ ಕ್ರೀಡಾಪಟುಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!