ತುಮಕೂರು: ನಗರದ ಬಿ.ಜಿ.ಎಸ್ ವೃತ್ತದಲ್ಲಿರುವ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಸೆ.19 ರ ಮಂಗಳವಾರ ವಿನಾಯಕ ಚತುರ್ಥಿಯಂದು 6ನೇ ವರ್ಷದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆ ನಿಶ್ಚಯಿಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಗಳಲ್ಲಿ ಅಡಗಿದ್ದ ಧಾರ್ಮಿಕ ಭಾವನೆಗೆ ಹೊಸರೂಪ ನೀಡಲು ಮನೆ ಮನೆಯಲ್ಲಿ ನಡೆಯುತ್ತಿದ್ದ ಗಣೇಶನ ಪೂಜೆಯನ್ನು 1893ರಲ್ಲಿ ಲೋಕಮಾನ್ಯ ಬಾಲಗಂಗಾ‘ರ್ ತಿಲಕ್ ಅವರು ನಾಡಹಬ್ಬವನ್ನಾಗಿ ಪರಿವರ್ತಿಸಿದರು, ಇದರಿಂದಾಗಿ ಹಿಂದೂಗಳಲ್ಲಿ ಧಾರ್ಮಿಕ ಭಾವನೆಯೊಂದಿಗೆ ಸ್ವತಂತ್ರ್ಯ ಹೋರಾಟಕ್ಕೂ ಪ್ರೇರಣೆ ನೀಡಿದರು, ಹಿಂದುಗಳಲ್ಲಿ ಸಾಮರಸ್ಯ, ಸಂಸ್ಕಾರ, ಸಂಸ್ಕೃತಿ, ಸುಸಂಸ್ಕೃತ ನಡತೆ ಹಾಗೂ ರಾಷ್ಟ್ರೀಯ ಭಾವನೆ ಮೂಡಲು ಆರಂಭಿಸಿತು, ಕಳೆದ ಆರು ವರ್ಷಗಳಿಂದ ತುಮಕೂರಿನಲ್ಲಿ ಹಿಂದೂ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾನೆ ನಡೆಯುತ್ತಿದ್ದು, ಈ ವರ್ಷವೂ ಸೆಪ್ಟೆಂಬರ್ 19 ರಂದು ಅದ್ದೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾನೆ ನಡೆಯಲಿದೆ ಎಂದರು.
ವಿಘ್ನ ನಿವಾರಕನನ್ನು ಸಮಸ್ತ ಹಿಂದೂ ಸಮಾಜವು ಶುಭಕಾರ್ಯಗಳಲ್ಲಿ ಪ್ರಥಮವಾಗಿ ಪೂಜಿಸಲ್ಪಡುವ ದೇವರಾಗಿದ್ದು ಹಿಂದೂ ಸಮಾಜದ ಹಾಗೂ ಲೋಕ ಕಲ್ಯಾಣಕ್ಕಾಗಿ ಕಳೆದ 5 ವರ್ಷದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಹಿಂದೂ ಮಹಾ ಗಣಪತಿಯ ಉತ್ಸವ ಅದ್ದೂರಿಯಾಗಿ ನೆರವೇರಿಸಲಾಗಿದೆ, ಈ ವರ್ಷವೂ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ನಿಶ್ಚಯಿಸಲಾಗಿದ್ದು ಹಿಂದೂ ಸಂಸ್ಕೃತಿ, ಸಂಸ್ಕಾರ ಹಾಗೂ ಏಕತೆ ಐಕ್ಯತೆಯಿಂದ ಬಾಳುವಂತೆ ಮಾಡುವುದೇ ಹಿಂದೂ ಮಹಾ ಗಣಪತಿಯ ಉದ್ದೇಶವಾಗಿರುತ್ತದೆ, ಸೆ.30 ರ ಶನಿವಾರ ಬೆಳಗ್ಗೆ 11 ಗಂಟೆಯಿಂದ ಹಿಂದೂ ಮಹಾ ಗಣಪತಿಯ ಅದ್ಧೂರಿ ವಿಸರ್ಜನಾ ಮಹೋತ್ಸವ ತುಮಕೂರಿನ ಸಮಸ್ತ ಹಿಂದೂ ಸಮಾಜದ ‘ಭಾಂದವರ ಸಹಕಾರ ಮತ್ತು ಸಹಯೋಗದೊಂದಿಗೆ, ಹರ- ಗುರು ಚರಮೂರ್ತಿಗಳ ಸಾನಿಧ್ಯದೊಂದಿಗೆ ತುಮಕೂರಿನ ರಾಜ ಬೀದಿಗಳಲ್ಲಿ ಹಲವಾರು ಕಲಾ ತಂಡಗಳೊಂದಿಗೆ ಮೆರವಣಿಯ ಮುಖಾಂತರ ಸಾಗಿ ನಂತರ ಹಿಂದೂ ಮಹಾ ಗಣಪತಿಯ ವಿಸರ್ಜನೆ ನಡೆಯಲಿದ್ದು, ಸಮಸ್ತ ಹಿಂದೂ ಸಮಾಜದ ಬಂಧುಗಳು ಆಗಮಿಸಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟಿ.ಬಿ.ಶೇಖರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಮುಖಂಡ ಜಿ.ಕೆ.ಶ್ರೀನಿವಾಸ್, ನಿರ್ದೇಶಕರಾದ ಕೋರಿ ಮಂಜಣ್ಣ ಹಾಗೂ ಮುಖಂಡರು ಪಾಲ್ಗೊಂಡಿದ್ದರು.
Comments are closed.