ಲಾರಿ ಚಾಲಕರು, ಕ್ಲಿನರ್ಗಳಿಗೆ ಆರೋಗ್ಯ ಶಿಬಿರ

264

Get real time updates directly on you device, subscribe now.


ತುಮಕೂರು: ಸಾರಿಗೆ ದಿವಸದ ಅಂಗವಾಗಿ ಸೆಪ್ಟೆಂಬರ್ 06 ರಂದು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಲಾರಿ ಚಾಲಕರು ಮತ್ತು ಕ್ಲಿನರ್ ಗಳಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಅಭಿನಂದನಾ ಸಮಾರಂಭ ವನ್ನು ಆಯೋಜಿಸಲಾಗಿದೆ ಎಂದು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ಸೆಪ್ಟೆಂಬರ್ 06 ರ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ ಮೂರು ಗಂಟೆಯವರೆಗೆ ಸಿದ್ದಗಂಗಾ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಶಿಬಿರವನ್ನು ಲಾರಿ ಮಾಲೀಕರ ಸಂಘದ ಜೊತೆಗೆ ಜಿಲ್ಲಾ ಹಮಾಲಿಗಳ ಸಂಘ, ಜಿಲ್ಲಾ ಲಾರಿ ಚಾಲಕರು ಮತ್ತು ಮಾಲೀಕರ ಸಂಘಗಳ ಸಹಯೋಗದಲ್ಲಿ ನಡೆಸುತ್ತಿದ್ದು ಸಂಘದಲ್ಲಿ ನೋಂದಾಯಿತ ಸುಮಾರು 2000 ಜನ ಚಾಲಕರು ಮತ್ತು ಕ್ಲೀನರ್ ಗಳಲ್ಲಿ 500- 600 ಜನರು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ, ಪ್ರಮುಖವಾಗಿ ಕಣ್ಣಿನ ದೋಷ, ಬೆನ್ನುಮೂಳೆ, ರಕ್ತದೊತ್ತಡ, ಮದುಮೇಹ, ರಕ್ತ ಪರೀಕ್ಷೆ ಜೊತೆಗೆ ಜನರಲ್ ಚೆಕಪ್ ನಡೆಯಲಿದ್ದು, ಅಗತ್ಯ ಇರುವವರಿಗೆ ಸ್ಥಳದಲ್ಲಿಯೇ ಕನ್ನಡಕ ನೀಡಲಾಗುವುದು, ಅಲ್ಲದೆ ಮೆಡಿಷನ್ ಸಹ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಟಿ.ಆರ್.ಸದಾಶಿವಯ್ಯ ತಿಳಿಸಿದರು.

ಸಾರಿಗೆ ದಿನದ ಅಂಗವಾಗಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡುವರು, ಶಾಸಕರಾದ ಜಿ.ಬಿ.ಜೋತಿಗಣೇಶ್, ತುಮಕೂರಿನ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಸಾರಿಗೆ ಅಧಿಕಾರಿ ಎಸ್.ರಾಜು, ಎಪಿಎಂಸಿ ಕಾರ್ಯದರ್ಶಿ ಎಂ.ವಿ.ಸುಮ, ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್, ತುಮಕೂರು ಲಾರಿ ಮಾಲೀಕರ ಬಳಕೆದಾರರ ಸೌರ್ಹಾದ ಸಹಕಾರಿಯ ಅದ್ಯಕ್ಷ ಎನ್.ಆರ್.ವಿಶ್ವಾರಾದ್ಯ ಭಾಗವಹಿಸುವರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅದ್ಯಕ್ಷ ಟಿ.ಜಿ.ಚನ್ನಬಸವ ಪ್ರಸನ್ನ ವಹಿಸಲಿದ್ದಾರೆ ಎಂದು ವಿವರ ನೀಡಿದರು.

ಸಿದ್ದಗಂಗಾ ಆಸ್ಪತ್ರೆಯ ಪಿಆರ್ಓ ಕಾಂತರಾಜು ಮಾತನಾಡಿ, ಲಾರಿ ಮಾಲೀಕರ ಸಂಘದ ಕೋರಿಕೆಯ ಮೇರೆಗೆ ಸೆಪ್ಟೆಂಬರ್ 06 ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03 ಗಂಟೆಯ ವರೆಗೆ ಸಿದ್ದಗಂಗಾ ಆಸ್ಪತ್ರೆಯ ನುರಿತ ವೈದ್ಯರು ಶಿಬಿರ ನಡೆಸಿಕೊಡಲಿದ್ದಾರೆ, ಕಣ್ಣು, ಕಿವಿ, ಬೆನ್ನುನೋವು, ಬಿಪಿ, ಶುಗರ್, ಹೃದಯಕ್ಕೆ ಸಂಬಂಧಿಸಿದ ಇಸಿಜಿ, ಮತ್ತಿತರ ತಪಾಸಣೆ ನಡೆಯಲಿವೆ, ಅಲ್ಲದೆ ಚಾಲಕರು ಮತ್ತು ಕ್ಲೀನರ್ಗಳ ಮಾನಸಿಕ ಆರೋಗ್ಯಕ್ಕಾಗಿ ಮಾನಸಿಕ ತಜ್ಞ ರಿಂದ ಸಹ ಕೌನ್ಸಿಲಿಂಗ್ ಆಯೋಜಿಸಲಾಗಿದೆ, ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಉಚಿತವಾಗಿ ಟ್ರೀಟ್ ಮೆಂಟ್ ನೀಡಲಾಗುವುದು, ಲಾರಿ ಚಾಲಕರು ಮತ್ತು ಕ್ಲೀನರ್ಗಳು ಇದರ ಲಾಭ ಪಡೆದುಕೊಳ್ಳಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ.ಚನ್ನಬಸವ ಪ್ರಸನ್ನ, ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ಕಾರ್ಯದರ್ಶಿ ಶೌಕತ್ ಉಲ್ಲಾಖಾನ್, ಸಹ ಕಾರ್ಯದರ್ಶಿ ಟಿ.ಎಸ್.ನಾಗೂಭೂಷಣ್ ಆರಾಧ್ಯ, ಖಜಾಂಚಿ ಶಿವರುದ್ರ ಆರಾಧ್ಯ, ನಿರ್ದೇಶಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!