ಬಸ್ ಹರಿದು ವಿದ್ಯಾರ್ಥಿ ಸಾವು

11,674

Get real time updates directly on you device, subscribe now.


ಕುಣಿಗಲ್: ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕ ಶಾಲಾ ಬಸ್ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಧಾರುಣ ಘಟನೆ ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.
ಮೃತನ್ನು ಬಾಲಾಜಿ (10) ಎಂದು ಗುರುತಿಸಲಾಗಿದ್ದು, ಈತ ಕೆಆರ್ಎಸ್ ಅಗ್ರಹಾರದಲ್ಲಿನ ಖಾಸಗಿ (ಬಿಜಿಎಸ್) ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ, ಸೋಮವಾರ ಸಂಜೆ ಎಂದಿನಂತೆ ಶಾಲೆ ಮುಗಿಸಿ ವಾಪಸ್ ಬಸ್ನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುವಾಗ ಘಟನೆ ನಡೆದಿದೆ, ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿದೆ.

ಮೃತ ದೇಹವಿಟ್ಟು ಪ್ರತಿಭಟನೆ
ಶಾಲಾ ಬಸ್ಸಿಗೆ ಸಿಲುಕಿ ಶಾಲಾ ಬಾಲಕ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಶಾಲಾ ಬಸ್ಸಿನ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರು, ಪೋಷಕರು ಬಸ್ಸಿಗೆ ಸಿಲುಕಿ ಮೃತಪಟ್ಟ ಬಾಲಕನ ಮೃತದೇಹ ಶಾಲಾ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು.
ಬಾಲಕ ಸೋಮವಾರ ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಕಟ್ಟಿಗೆಹಳ್ಳಿಗೆ ತೆರಳುವಾಗ ಮುಂದಿನ ಹಳ್ಳಿಯಾದ ಈಚಲು ಪಾಳ್ಯದ ಬಳಿ ಬಸ್ನ ಬಾಗಿಲಿನಲ್ಲಿ ನಿಂತಿದ್ದು, ಚಾಲಕ ಅಜಾಗರೊಕತೆಯಿಂದ ವೇಗವಾಗಿ ವಾಹನ ಚಾಲನೆ ಮಾಡಿದರ ಪರಿಣಾಮ ಬಾಲಕ ಬಸ್ಸಿನಿಂದ ಬಿದ್ದಿದ್ದು ನಂತರ ಬಸ್ಸಿನ ಹಿಂಬದಿ ಚಕ್ರ ಬಾಲಕನ ತಲೆಮೇಲೆ ಹತ್ತಿದ್ದರಿಂದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ ಪೋಷಕರು, ಶಾಲಾ ಬಸ್ಸಿನ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿದರಲ್ಲದೆ, ಶಾಲಾಡಳಿತ ವಿಭಾಗದ ಕ್ರಮದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಈ ಮಧ್ಯೆ ಕೆಲವರು ಶಾಲೆಯ ಆಡಳಿತದ ಮುಖ್ಯಸ್ಥರು, ಸ್ವಾಮೀಜಿಗಳು ಸ್ಥಳಕ್ಕಾಗಮಿಸುವ ವರೆಗೂ ಮೃತದೇಹ ತೆರವುಗೊಳಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಶಾಲಾ ಸಿಬ್ಬಂದಿ ಧರಣಿ ನಿರತರೊಂದಿಗೆ ಚರ್ಚೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!