ತುಮಕೂರು: ಗುರಿ ತೋರಿಸುವ ಗುರುಗಳನ್ನು ಗೌರವಿಸುವವರು ಪ್ರಪಂಚಾದ್ಯಂತ ಗೌರವಿಸಲ್ಪಡುತ್ತಾರೆ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆಯಿದೆ, ವಿದ್ಯಾರ್ಥಿಗಳನ್ನು ಅರ್ಥೈಸಿಕೊಂಡು ಬೋಧನೆಯಲ್ಲಿ ತೊಡಗುವವರು ಸಮರ್ಥ ಶಿಕ್ಷಕರಾಗುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.
ತುಮಕೂರು ರೌಂಡ್ಟೇಬಲ್- 173 ಹಾಗೂ 41 ಇಯರ್ಸ್ ಕ್ಲಬ್ ವತಿಯಿಂದ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರುದೇವೋ ಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರನ್ನು ಗೌರವಿಸಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್ ಮಾತನಾಡಿ, ಶಿಕ್ಷಕರಾಗುವುದೆಂದರೆ ಇತರ ಎಲ್ಲಾ ಉದ್ಯೋಗಗಳನ್ನು ಸೃಷ್ಟಿಸುವ ಅತ್ಯಂತ ಗೌರವಾನ್ವಿತ ಉದ್ಯೋಗ, ಬೋಧನೆಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕ್ಷೇತ್ರದಲ್ಲಿ ಸದಾ ಹೊಸತನ ಕಂಡುಕೊಳ್ಳುತ್ತಿರಬೇಕು, ತಂತ್ರಜ್ಞಾನದ ಬಳಕೆಯನ್ನು ಸಮರ್ಪಕವಾಗಿ ತಿಳಿದವರು ವಿದ್ಯಾರ್ಥಿಗಳನ್ನು ಹೆಚ್ಚು ಪ್ರಭಾವಿಸಬಲ್ಲರು, ಗೂಗಲ್ಗಿಂತ ತರಗತಿಯ ಗುರುಗಳು ತಮ್ಮ ಗೊಂದಲ ಪರಿಹರಿಸುತ್ತಾರೆ ಎಂಬುದು ಮಕ್ಕಳಿಗೆ ಅರ್ಥವಾದರೆ ಅವರು ಶಿಕ್ಷಕರನ್ನು ಹೆಚ್ಚು ಅವಲಂಬಿಸುತ್ತಾರೆ, ತನ್ಮೂಲಕ ಸ್ವಯಂ ಕಲಿಕೆಯನ್ನೂ ಉತ್ತೇಜಿಸಿದಂತಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರುರೌಂಡ್ಟೇಬಲ್ 173 ಅಧ್ಯಕ್ಷಆಕಾಶ್ ಆರ್ ಮುಲ್ಲಂಗಿ ಶಿಕ್ಷಣದ ಮೂಲಕ ಸ್ವಾತಂತ್ರ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ರೌಂಡ್ ಟೇಬಲ್ ದೇಶಾದ್ಯಂತ ಕೆಲಸ ಮಾಡುತ್ತಿದೆ, ಸರಕಾರಿ ಶಾಲೆಗಳಿಗೆ ಅಗತ್ಯವಿರುವ ತರಗತಿ ಕೊಠಡಿಗಳನ್ನು ಕಟ್ಟಿಸಿ ಕೊಡುವುದರ ಜೊತೆಗೆ ಮಕ್ಕಳಿಗೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ರೌಂಡ್ ಟೇಬಲ್ ಸಮಾನ ಮನಸ್ಕರು ಶ್ರಮಿಸುತ್ತಿದ್ದಾರೆ, ಶಿಕ್ಷಕರನ್ನು ಗೌರವಿಸುವುದು ಅವರ ಸೇವೆಗೆ ಪ್ರತಿಯಾಗಿ ನಾವು ತೋರಬಹುದಾದ ಸಣ್ಣಕಾಣಿಕೆ ಎಂದರು.
41 ಇಯರ್ಸ್ ಕ್ಲಬ್ ಅಧ್ಯಕ್ಷ ಭಾರತೀಶ್ ಮಾತನಾಡಿ ಪ್ರತಿಯೊಬ್ಬರೊಳಗೂ ಒಬ್ಬೊಬ್ಬ ಗುರುವಿರುತ್ತಾನೆ, ನಮಗೆ ಎದುರಾಗುವ ಎಲ್ಲರಿಂದಲೂ ನಾವು ಕಲಿಯುತ್ತೇವೆ, ಶಿಕ್ಷಕರ ದಿನದಂದು ಎಲ್ಲರನ್ನೂ ಸ್ಮರಿಸೋಣ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುರಳೀಧರ, ರಾಮಕೃಷ್ಣಯ್ಯ, ವೀರಾಚಾರ್, ಡಾ.ಶಶಿಕಲಾ, ಮಂಜುಳಾ, ಶ್ರೀಕಾಂತ್, ಅಂಬಿಕಾ, ದಯ ನರಸಿಂಹಯ್ಯ, ಮಂಜುನಾಥ್, ಶಿವಪ್ರಸಾದ್, ಶಾಂತಮಣಿ, ಗಂಗಮ್ಮ, ರಮೇಶ್ ಮತ್ತು ಸಲೊಮನ್ ಸಂದೀಪ್ ಅವರನ್ನು ಗೌರವಿಸಲಾಯಿತು. ರೌಂಡ್ಟೇಬಲ್ ಕಾರ್ಯದರ್ಶಿ ವರುಣ್ ಹಾಗೂ ವಿದ್ಯಾನಿಧಿ ಪ್ರಾಂಶುಪಾಲರು, ಉಪನ್ಯಾಸಕಿ ನಿಖಿತಾ, ಆರತಿ ಪಟ್ರಮೆ, ದೀಪಾ, ಗೋವಿಂದರಾಜು, ರಾಜೀವ್.ಕೆ.ಆರ್, ವಿನಯ್, ದಿವ್ಯಜ್ಯೋತಿ, ಹೇಮಲತಾ.ಎಂ.ಎಸ್. ಇತರರು ಇದ್ದರು.
Comments are closed.