ಜಾನಪದ ಸಂಸ್ಕೃತಿ ಮರೆತರೆ ನಮ್ಮತನ ಬಿಟ್ಟಂತೆ

434

Get real time updates directly on you device, subscribe now.


ತುಮಕೂರು: ಕಲೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ ಇವೆಲ್ಲವೂ ಜಾನಪದ ಸಂಸ್ಕೃತಿಯ ಬೇರು, ಜಾನಪದ ಸಂಸ್ಕೃತಿ ಮರೆತರೆ ನಮ್ಮ ತನ ಬಿಟ್ಟಂತೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಹಿರಿಮೆ ಬಹಳ ದೊಡ್ಡದು, ಹಿಂದೆ ಇದ್ದ ಜಾನಪದ ಆಟಗಳು, ಕೃಷಿ ಪದ್ಧತಿ, ಚಿಕಿತ್ಸಾ ಕ್ರಮ, ನೈಸರ್ಗಿಕ ಕಲೆಗಳು ಇಂದು ಇಲ್ಲವಾಗಿವೆ, ಗ್ರಾಮೋದ್ಧಾರದಿಂದ ಜಾನಪದ ಸಂಸ್ಕೃತಿ ಉಳಿಸಬಹುದು, ಆದ್ದರಿಂದ ಕನ್ನಡ ವಿಭಾಗವು ಜಾನಪದ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಲೇಖಕ ಡಾ.ಹನಿಯೂರು ಚಂದ್ರೇಗೌಡ ಮಾತನಾಡಿ, ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿ ಒಳಗೊಂಡ ಸಮುದಾಯದ ಅರಿವು, ಪ್ರಜ್ಞೆ ಎಲ್ಲರಿಗೂ ಅಗತ್ಯವಿದೆ, ಜಾನಪದಕ್ಕೆ ಅಶ್ಲೀಲವಿಲ್ಲ, ಜನಪದ ಗೀತೆಗಳ ಭಾವ ಅನುಭವಿಸಬೇಕು, ಹಿರಿಯರ ಜಾನಪದ ಆಶಯಗಳನ್ನು ಆಲಿಸಬೇಕು ಎಂದು ಹೇಳಿದರು.

ಬುಡಕಟ್ಟು ಸಮುದಾಯದ ಹಾಗೂ ಜಾನಪದ ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು, ನಶಿಸಿ ಹೋಗಿರುವ ಹಲವಾರು ಸಮುದಾಯಗಳ ಬದುಕು, ಕಲೆ, ಸಂಸ್ಕೃತಿ ಗೌರವಿಸುವ ಮನೋಭಾವ ಬೆಳೆಸಬೇಕು ಮತ್ತು ಜೀವಂತವಾಗಿ ಇರಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದರು.
ಕಾರ್ಯಕ್ರಮದ ಸಂಯೋಜಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ, ಜಾನಪದ ನಮ್ಮ ಸಂಸ್ಕೃತಿ, ಪ್ರಾದೇಶಿಕ ಅನುಭವ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ನಂಬಿಕೆ ಕಟ್ಟಿಕೊಂಡು ಬೆಳವಣಿಗೆಯಾಗಲು ಜಾನಪದ ಸಾಹಿತ್ಯವೇ ಕಾರಣವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!