ಸೋಪಾನ ಬಾವಿ ರಕ್ಷಿಸಲಾಗುತ್ತೆ: ತಹಶೀಲ್ದಾರ್

183

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿನ ಹಂದನಕೆರೆಯ ಸೋಪಾನ ಬಾವಿ ವಿಶೇಷತೆ, ವೈವಿಧ್ಯತೆ ಹಾಗೂ ಬಾವಿಯ ದುಸ್ಥಿತಿಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಗುರುವಾರ ತಹಶೀಲ್ದಾರ್ ನಾಗಮಣಿಯವರು ಸೋಪಾನ ಬಾವಿ ಪರಿಶೀಲನೆ ನಡೆಸಿ ರಕ್ಷಿಸುವುದಾಗಿ ಭರವಸೆ ನೀಡಿದ್ದಾರೆ.

ತುಮಕೂರು ವಾರ್ತೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿ ಕೆಲ ತಿಂಗಳು ಮಾತ್ರ ಆಗಿದ್ದು, ಬಾವಿಯ ಬಗ್ಗೆ ಪತ್ರಿಕೆಯಲ್ಲಿ ವರದಿ ಗಮನಿಸಿ ಸೋಪಾನ ಬಾವಿ ಸ್ಥಳಕ್ಕೆ ಭೇಟಿ ನೀಡಿ ಬಾವಿಯ ಪರಿಶೀಲನೆ ನಡೆಸಲಾಗಿದೆ, ಈ ಬಾವಿ ಅನೇಕ ವಿಶೇಷತೆಯಿಂದ ಕೂಡಿದ್ದು, ಇದನ್ನು ರಕ್ಷಿಸಿ ಅಭಿವೃದ್ಧಿ ಪಡಿಸುವ ಬಗ್ಗೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಹಾಗೂ ಪುರತತ್ವ ಇಲಾಖೆಗೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!