ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಚಾಲಕ- ನಿರ್ವಾಹಕರು

ಸದಾ ಜನ-ಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಇಂದು ಖಾಲಿ-ಖಾಲಿ

147

Get real time updates directly on you device, subscribe now.

ತುರುವೇಕೆರೆ: ಸ್ಥಳೀಯ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರಾಗುವ ಮೂಲಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಸದಾ ಜನ-ಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಕಳೆದ ಎರಡು ದಿನಗಳಿಂದ ಪ್ರಯಾಣಿಕರು ಹಾಗೂ ಬಸ್ಗಳ ಓಡಾಟವಿಲ್ಲದೇ ಬಿಕೋ ಎನ್ನುತ್ತಿದೆ.
ಮುಷ್ಕರದ ಬಗ್ಗೆ ಈ ಮೊದಲೇ ತಿಳಿದಿದ್ದ ಸಾರ್ವಜನಿಕರು ಹಾಗೂ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್ ನಿಲ್ದಾಣದ ಕಡೆ ಸುಳಿಯಲಿಲ್ಲ, ಅಗತ್ಯ ವಸ್ತುಗಳ ಖರೀದಿಗೆ ಪಟ್ಟಣಕ್ಕೆ ಬರುವ ಸಾರ್ವಜನಿಕರು ಆಟೋಗಳನ್ನು ಅವಲಂಬಿಸಿದ್ದರು, ಮತ್ತಷ್ಟು ಮಂದಿ ದ್ವಿಚಕ್ರವಾಹನಗಳಲ್ಲಿ ಪಟ್ಟಣಕ್ಕೆ ಆಗಮಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ನಗರ ಪ್ರದೇಶದ ಶಾಲೆಗಳಿಗೆ ಹಳ್ಳಿಗಾಡಿನಿಂದ ಬಸ್ ಮೂಲಕ ಬರುತ್ತಿದ್ದ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದರು. ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸದರೂ ಸಹ ಗ್ರಾಮೀಣರು ಆಗಮಿಸದ ಹಿನ್ನಲೆಯಲ್ಲಿ ಕಚೇರಿ ಆವರಣಗಳು ಖಾಲಿಯಾಗಿದ್ದವು.
ಪಟ್ಟಣದಿಂದ ಬೆಂಗಳೂರು ಮತ್ತಿತರ ಮಾರ್ಗಗಳಿಗೆ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಸ್ ಗಳಲ್ಲಿ ನಿತ್ಯ ಕಚೇರಿಗೆ ಬರಲೇಬೇಕಾದ ಅನಿವಾರ್ಯತೆ ಇರುವ ನೌಕರರು ಮಾತ್ರ ಪ್ರಯಾಣಿಸುತ್ತಿದ್ದು ಕಂಡುಬಂತು. ಬಸ್ ನಿಲ್ದಾಣದ ಆಸುಪಾಸಿನಲ್ಲಿ ಪ್ರಯಾಣಿಕರ ಆಗಮನವಿಲ್ಲದೇ ಬಸ್ ನಿಲ್ದಾಣದ ಆಸುಪಾಸಿನ ವಾಣಿಜ್ಯ ಮಳಿಗೆಗಳ ವ್ಯಾಪಾರ ವಹಿವಾಟು ಇಳಿಕೆಯಾಗಿತ್ತು, ಬಸ್ ನಿಲ್ದಾಣದ ಹೋಟೆಲ್ ಹಾಗೂ ಮಳಿಗೆಗಳು ಹೆಚ್ಚು ನಷ್ಟ ಅನುಭವಿಸುವಂತಾಗಿತ್ತು.
ಮುಷ್ಕರ ಬೆಂಬಲಿಸಿದ ಸಾರಿಗೆ ನೌಕರರು ತಮ್ಮ ಮನೆಗಳಲ್ಲಿ ವಿಶ್ರಾಂತಿಯ ಮಾರುಹೋಗಿದ್ದರು, ಇತ್ತ ನಿತ್ಯವೂ ದೂರದ ಊರುಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಸೇವೆ ನೀಡುತ್ತಿದ್ದ ಬಸ್ ಗಳು ಡಿಪೋದಲ್ಲೇ ಬಂಧಿಯಾಗಿದ್ದವು, ಬಸ್ ನಿಲ್ದಾಣ ಹಾಗೂ ಖಾಸಗಿ ವಾಹನಗಳು ಸಂಚರಿಸುವ ಮಾರ್ಗಗಳ ಮೇಲೆ ಪೋಲೀಸರು ಕಟ್ಟೆಚ್ಚರ ವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!