ಹುಳಿಯಾರು: ಎರಡು ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಹಣ, ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಮತ್ತು ಬರದಲೇಪಾಳ್ಯ ಗ್ರಾಮಗಳಲ್ಲಿ ಗುರುವಾರ ರಾತ್ರಿ ಜರುಗಿದೆ.
ಎರಡೂ ಗ್ರಾಮಗಳಿಗೆ ನುಗ್ಗಿದ ಕಳ್ಳರು ಬೀಗ ಹಾಕಿರುವ ಮನೆಗಳನ್ನೇ ನೋಡಿ ನೋಡಿ ಮನೆಯ ಬೀಗವನ್ನು ಆಯುಧದಿಂದ ಮುರಿದು ಕಳ್ಳತನ ಮಾಡಿದ್ದಾರೆ, ಮೊದಲು ತಮ್ಮಡಿಹಳ್ಳಿ ಗ್ರಾಮದಲ್ಲಿ ಕಳ್ಳತನ ಮಾಡಿ ನಂತರ ಬರದಲೇಪಾಳ್ಯದಲ್ಲಿ ಕಳ್ಳತನ ಮಾಡಿ ಕೊನೆಯಲ್ಲಿ ಜಮೀನೊಂದರಲ್ಲಿ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಕುಡ್ಲು ಎಸೆದು ಪರಾರಿಯಾಗಿದ್ದಾರೆ.
ತಮ್ಮಡಿಹಳ್ಳಿಯ ವಿಶ್ವರಯ್ಯ ಅವರ ಚಿಲ್ಲರೆ ಅಂಗಡಿಯಲ್ಲಿ ಸುಮಾರು 6 ಸಾವಿರ ರೂ. ನಗದು ಹಾಗೂ 6 ಸಾವಿರ ರೂ. ಬೆಲೆಯ ಅಂಗಡಿ ಸಾಮಾನು, ಟಿ.ಬಿ.ಶ್ರೀಕಂಠಮೂರ್ತಿ ಮನೆಯಲ್ಲಿ 500 ಗ್ರಾಂ ಬಳೆ, ಲೋಹದ ವಸ್ತುಗಳು, ರೇಷ್ಮೆ ಸೀರೆಗಳು, ಸುನಂದಮ್ಮ ಮನೆಯಲ್ಲಿ 20 ಸಾವಿರ ರೂ. ನಗದು, ದತ್ತಾತ್ರೆಯ ಮನೆಯಲ್ಲಿ 5 ಸಾವಿರ ರೂ. ನಗದು ಮತ್ತು ಕಂಚು ತಾಮ್ರದ ವಸ್ತುಗಳು, ದೇವರಾಜು ಮನೆಯಲ್ಲಿ ಹಿತ್ತಾಳೆ ಕೊಳಗ, ಸಿದ್ದರಾಮಯ್ಯ ಮನೆಯಲ್ಲಿ ಕಂಚು ಮತ್ತು ಹಿತ್ತಾಳೆ ಪಾತ್ರಗಳು, ಶಂಕುಂಲ ಬಾಬು ಮನೆಯಲಿ, 8 ಗ್ರಾಂ ನ ಒಂದು ಜೊತೆ ಓಲೆ, ಒಂದು ಜೊತೆ ಬೆಳ್ಳಿಯ ಕಾಲು ಚೈನು, 21 ಸಾವಿರ ರೂ. ನಗದು ಕಳ್ಳತನವಾಗಿದೆ.
ಬರದಲೇಪಾಳ್ಯದ ಮೆಡಿಕಲ್ ಚನ್ನಬಸವಯ್ಯ ಅವರ ಮನೆಯಲ್ಲಿ 15 ಸಾವಿರ ನಗದು, ಒಂದು ಮಾಂಗಲ್ಯ ಸರ ಹಾಗೂ ಬೆಳ್ಳಿ ವಸ್ತುಗಳು, ಗಂಗಣ್ಣ ಅವರ ಮನೆಯ ಅವರ ತಾಯಿಯ ಕರಿಮಣಿ ತೆಗೆದು ಹಾಕಿ 2 ತಾಳಿ ಕದ್ದಿದ್ದಾರೆ, ಅಡವೀಶ್ ಅವರ ಮನೆ ಹಾಗೂ ದುರ್ಗದ ಸೀಮೆ ಪಾಳ್ಯದ ಭಾಗ್ಯಮ್ಮ ಅವರ ಮನೆ ಬೀಗ ಹೊಡೆದಿದ್ದಾರೆ, ಆದರೆ ಇವೆರಡು ಮನೆಯಲ್ಲಿ ಏನೂ ಸಿಕ್ಕಿಲ್ಲ,
ಕಳ್ಳತನ ಆಗಿರುವ ಮನೆಗಳಿಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಭೇಟಿ ನೀಡಿ ಕಳ್ಳರು ಬಿಟ್ಟಿರುವ ಕುರುಹು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ, ಹುಳಿಯಾರು ಪಿಎಸ್ಐ ಧರ್ಮಾಂಜಿ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.