ಶನಿಮಹಾತ್ಮ ದೇವಾಲಯದಲ್ಲಿ ವಿಶೇಷ ಪೂಜೆ

1,402

Get real time updates directly on you device, subscribe now.


ಗುಬ್ಬಿ: ಪಟ್ಟಣದ ಎನ್.ಎಚ್.206 ರಸ್ತೆಯ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ಶ್ರಾವಣ ಮಾಸದ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮ ಮುಂಜಾನೆಯಿಂದ ರಾತ್ರಿವರೆಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಡೆದವು, ಸಾವಿರಾರು ಭಕ್ತರು ಶ್ರೀಶನಿದೇವರ ಪೂಜೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.

ಸುಮಾರು 75 ವರ್ಷಗಳ ಹಿಂದೆ ಚಿಕ್ಕದಾಗಿ ನಿರ್ಮಾಣವಾಗಿದ್ದ ದೇವಾಲಯಕ್ಕೆ ಕುಂಬಯ್ಯ ಹಾಗೂ ಚಿಕ್ಕ ನರಸಯ್ಯ ಸಹೋದರರಿಂದ ಪ್ರಾರಂಭವಾಗಿದ್ದ ಹಳೆಯ ದೇವಾಲಯ ಕಳೆದ ಎರಡು ವರ್ಷದ ಹಿಂದೆ ಪುನರ್ ನಿರ್ಮಾಣ ಮಾಡುವ ಮೂಲಕ ಇಡಿ ಗುಬ್ಬಿ ತಾಲೂಕಿನಲ್ಲಿ ಒಂದು ವಿಶೇಷ ಶನಿಮಹಾತ್ಮ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಕುಂಭಯ್ಯನ ವಂಶಸ್ಥರು ಹಾಗೂ ಮಕ್ಕಳು ಮೊಮ್ಮಕ್ಕಳು ಹಾಗೂ ಭಕ್ತಾದಿಗಳ ನೆರವಿನಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು ಇಲ್ಲಿ ನಿರ್ಮಾಣವಾಗಿರುವ ಶ್ರೀಶನಿ ದೇವರ ವಿಗ್ರಹ ಶಾಂತ ಸ್ವರೂಪಿಯಾಗಿ ಎಲ್ಲಾ ಭಕ್ತರನ್ನು ಹರಸುವ ದೈವಿಯಾಗಿದ್ದಾರೆ, ಬಂದಂತಹ ಭಕ್ತರಿಗೆ ಸಕಲವನ್ನು ಕೊಡುವ ದೇವರಾಗಿದ್ದು, ಕಷ್ಟದಲ್ಲಿದ್ದವರಿಗೆ ಹಲವು ವಿಶೇಷ ಪೂಜೆ ಮೂಲಕ ಬಗೆಹರಿಸುವ ಶನಿ ಮಹಾತ್ಮನಾಗಿದ್ದು ಶ್ರಾವಣ ಮಾಸದ ಶನಿವಾರ ಸೇರಿದಂತೆ ಪ್ರತಿ ಶನಿವಾರ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ, ರಾಜ್ಯದ ಭದ್ರಾವತಿ, ನೆಲಮಂಗಲ, ಬೆಂಗಳೂರು, ತುಮಕೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಭಕ್ತರು ಆಗಮಿಸಿ ಶ್ರೀಶನಿ ದೇವರಿಗೆ ನಡೆದುಕೊಳ್ಳುತ್ತಿದ್ದು ಇದುವರೆಗೂ ಹಲವು ಪವಾಡ ಸಹ ನಡೆದಿದೆ.

ಶ್ರಾವಣ ಶನಿವಾರದಂದು ಇಡೀ ದೇವಾಲಯದಲ್ಲಿ ಹಣ್ಣು ಹಾಗೂ ಹೂವಿನಿಂದ ವಿಶೇಷ ಅಲಂಕಾರ ಮಾಡಿದ್ದು ಸಾವಿರಾರು ಭಕ್ತರು ದೇವಾಲಯದ ಕಡೆ ಆಗಮಿಸಿ ಪುನೀತರಾಗುತ್ತಿದ್ದಾರೆ.

ಪ್ರಧಾನ ಅರ್ಚಕರಾದ ನಿರಂಜನ್, ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ವಾಸುದೇವ ಮೂರ್ತಿ, ಖಜಾಂಚಿ ರಮೇಶ್, ಗುರು ಧರ್ಮದರ್ಶಿ ಕೃಷ್ಣ ಮೂರ್ತಿ, ಆಡಳಿತ ಮಂಡಳಿಯ ಸದಸ್ಯಅಶೋಕ್, ಉಮೇಶ್, ಕುಮಾರ್, ನಾಗೇಶ್, ವೆಂಕಟೇಶ್ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!