ಸೋಲಾರ್ ಪಾರ್ಕ್ನಿಂದ ಪಾವಗಡ ವಿಶ್ವಕ್ಕೆ ಪರಿಚಿತ

ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಾಗಿವೆ: ಡಾ.ಜಿ.ಪರಮೇಶ್ವರ್

209

Get real time updates directly on you device, subscribe now.


ಪಾವಗಡ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ಧಿ ಕೆಲಸ ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ಧಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.

ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ಜನಸಾಮಾನ್ಯರ ಅಭಿವೃದ್ಧಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದರು, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನೂರು ದಿನಗಳಾಗಿವೆ, ಅಷ್ಟರಲ್ಲೇ ತಾಲ್ಲೂಕಿನಲ್ಲಿ 147 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸುತ್ತಿರುವುದನ್ನು ಜನತೆ ತಿಳಿಯಬೇಕು, ರಾಜ್ಯದ 135 ಕ್ಷೇತ್ರದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಬಿಜೆಪಿಗರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ಪ್ರಾರಂಭಿಸಿದ್ದೇವೆ ಎಂದರು.

ಸುಮಾರು 6.5 ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 58.43 ಕೋಟಿ ವೆಚ್ಚದ ಎನ್ಆರ್ಇಜಿ ಕಾಮಗಾರಿಗಳು, 4.86 ಕೋಟಿ ವೆಚ್ಚದ ಪ್ರಧಾನ ಮಂತ್ರಿ ಆವಾಜ್ಯೋಜನೆ, 19.36 ಕೋಟಿ ವೆಚ್ಚದ ಜೆಜೆಎಂ ಯೋಜನೆ, 6 ಕೋಟಿ ವೆಚ್ಚದಲ್ಲಿ 2 ಪೊಲೀಸ್ ಠಾಣೆ ನಿರ್ಮಾಣ, ಸೋಲಾರ್ ಸಿಎಸ್ಆರ್ ನಿಧಿಯಿಂದ 45 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಬದ್ದ ಎಂಬ ಭರವಸೆ ನೀಡಿದರು.
ಮಾಜಿ ಶಾಸಕ ವೆಂಕಟರಮಣಪ್ಪ ಅವರ ಕನಸಿನ ಕೂಸಾದ ಭದ್ರಾ ಮೇಲ್ದಂಡೆ ಯೋಜನೆ ಮತ್ತು ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಜನರ ಉಪಯೋಗಕ್ಕೆ ಬರಲಿವೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಹಣ ನೀಡದಕಾರಣ ಇಂದು ಯೋಜನೆಗಳ ಮೊತ್ತ 28 ಸಾವಿರ ಕೋಟಿ ಹೆಚ್ಚಾಗಿ ಎಂದರು.

ತಾಲೂಕಿಗೆ ರಿಂಗ್ರೋಡ್, ವಸತಿ ಶಾಲೆಗಳು, ಎರಡು ಸಾವಿರ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನಿಡಿದರು.
ಶಾಸಕ ವೆಂಕಟೇಶ್ ಮಾತನಾಡಿ, ಪಾವಗಡಕ್ಕೆ ಅವಶ್ಯಕವಾದ ರಸ್ತೆ, ರಿಂಗ್ರೋಡ್, ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ, ಕೊಳಗೇರಿ ನಿವಾಸಿಗಳಿಗೆ ಮನೆ ಮತ್ತು ನಿವೇಶನ ನೀಡಲು ಸಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ, ಭದ್ರಾ ಮೇಲ್ದಂಡೆ ಯೋಜನೆ ನೀರು ಶೀಘ್ರವಾಗಿ ತಾಲೂಕಿಗೆ ಬರಲಿದೆ ಎಂದರು.

ಮಾಜಿ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್ಪಿ ಕೆ.ವಿ.ಅಶೋಕ್, ಸೋಲಾರ್ ಸಿಇಒ ಅಮರನಾಥ್, ತಹಶೀಲ್ದಾರ್ ವರದರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ವಕ್ತಾರ ನಿಖೇತ್ರಾಜ್ ಮೌರ್ಯ, ಮುಖಂಡರಾದ ರಾಜೇಶ್, ರವಿ, ಬತ್ತಿನೇನಿ ನಾನಿ, ಚನ್ನಕೇಶವ, ಮಾನಂ ವೆಂಕಟಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!