ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಸೇರಿದಂತೆ ಹಲವು ವೈದ್ಯರು ಹನ್ನೊಂದುವರೆ ಯಾದರೂ ಸಕಾಲಕ್ಕೆ ಆಗಮಿಸುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದು, ಪ್ರತಿಭಟನೆಗೆ ಬಜರಂಗದಳ ಕಾರ್ಯಕರ್ತರು ಬೆಂಬಲ ನೀಡಿದ ಘಟನೆ ನಡೆಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೊಸಕೆರೆ ಗ್ರಾಮದ ಶಿವಕುಮಾರ್ ಎಂಬುವರು ತಮ್ಮ 16 ತಿಂಗಳ ಮಗುವನ್ನು ಕರೆತಂದಿದ್ದು, ಮಕ್ಕಳ ವೈದ್ಯರು ಕೊಠಡಿಯಲ್ಲಿ ಇರಲಿಲ್ಲ, ನಂತರ ಇತರೆ ವೈದ್ಯರಿಗೆ ತೋರಿಸಲು ಹೋದಾಗ ಬಹುತೇಕ ವೈದ್ಯರು ತಪಾಸಣೆ ಕೊಠಡಿಗಳು ಖಾಲಿ ಇದ್ದು, ಹನ್ನೊಂದುವರೆ ಯಾದರೂ ಯಾರೂ ವೈದ್ಯರಿಲ್ಲದೆ ಇದ್ದುದರಿಂದ ತೀವ್ರ ಅಸಮಾಧಾನಗೊಂಡು ಶಿವಕುಮಾರ್, ಸಮೀಪದಲ್ಲೆ ಇದ್ದ ತಾಲೂಕು ಆರೊಗ್ಯಾಧಿಕಾರಿಗಳ ಕಚೇರಿಗೆ ತೆರಳಿ ದೂರಿದರಲ್ಲದೆ, ಪರಿಶೀಲನೆ ಮಾಡುವಂತೆ ಟಿಎಚ್ಒ ಮರಿಯಪ್ಪ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗಲು ವೈದ್ಯರು ಲಭ್ಯ ಇರಲಿಲ್ಲ ಎನ್ನಲಾಗಿದೆ.
ಶಿವಕುಮಾರ್ ಇತರರು ಪ್ರತಿಭಟನೆಗೆ ಮುಂದಾಗಿ ಮಕ್ಕಳ ವೈದ್ಯರ ಕೊಠಡಿಗೆ ತಾವೆ ಒಂದು ಬೀಗ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು, ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ ತಾಲೂಕು ಬಜರಂಗದಳದ ಸಂಚಾಲಕ ಗಿರೀಶ್, ಪದಾಧಿಕಾರಿ ಕಾರ್ತೀಕ್ ಇತರರು ಆಗಮಿಸಿ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ಬಾಬು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಆಡಳಿತ ವೈದ್ಯಾಧಿಕಾರಿಗಳು ಮಕ್ಕಳ ತಜ್ಞರು ರಜೆ ಹಾಕಿದ್ದಾರೆ ಎಂದು ಹೇಳಿದ್ದು ಅದಕ್ಕೆ ಸೂಕ್ತ ದಾಖಲೆ ನೀಡದ ಕಾರಣ ಪ್ರತಿಭಟನಾಕಾರರು ಆಕ್ಷೇಪಿಸಿ ವಾಗ್ವಾದಕ್ಕೆ ಇಳಿದರು, ಆಡಳಿತ ವೈದ್ಯಾಧಿಕಾರಿಗಳು ಮಕ್ಕಳ ತಜ್ಞರು ನ್ಯಾಯಾಲಯ ಪ್ರಕರಣಕ್ಕೆ ತೆರಳುವುದಾಗಿ ಹೇಳಿದ್ದರಿಂದ ಎರಡು ದಿನ ರಜೆ ಮೌಖಿಕವಾಗಿ ಹೇಳಿದ್ದಾರೆ, ಉಳಿದಂತೆ ವೈದ್ಯರು ಇಲ್ಲದಿರುವ ಬಗ್ಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
Comments are closed.