ಕುಣಿಗಲ್: ವಿವಿಧ ಶಾಲಾ ಬಸ್ಸುಗಳ ದಾಖಲೆ ಸೇರಿದಂತೆ ಬಸ್ಸಿನಲ್ಲಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಶಾಲಾಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಬಗ್ಗೆ ಪರಿಶೀಲಿಸಲು ಕುಣಿಗಲ್ ಸಿಪಿಐ ನವೀನ್ಗೌಡ ನೇತೃತ್ವದಲ್ಲಿ ಪೊಲೀಸರ ತಂಡ ಸೋಮವಾರ ವಿವಿಧ ಶಾಲಾ ಬಸ್ಗಳ ತಪಾಸಣೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡಿದರು.
ಶಾಲೆ ಬಸ್ಸಿನಿಂದ ಬಾಲಕ ಬಿದ್ದು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ತಾಲೂಕಿನಲ್ಲಿ ಘಟನೆ ಮರುಕಳಿಸದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ, ಸೋಮವಾರ ಸಿಪಿಐ ನವೀನ್ಗೌಡ ನೇತೃತ್ವದಲ್ಲಿ ಸಿಬ್ಬಂದಿ ಶಾಲಾ ಬಸ್ಸು ಹೊಂದಿರುವ ಶಾಲೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ವೇಳೆಯಲ್ಲಿ ಶಾಲಾ ಬಸ್ಸುಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಕ್ಕಳ ಬಗ್ಗೆ ಕೈಗೊಳ್ಳಬೇಕಾದ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ ನೀಡಿದರು, ತಪಾಸಣೆ ವೇಳೆಯಲ್ಲಿ ಪರ್ಮಿಟ್ ಇಲ್ಲದ ಒಂದು ಶಾಲಾ ಬಸ್ ಪತ್ತೆಯಾಗಿದ್ದು ಕ್ರಮಕ್ಕೆ ಸಾರಿಗೆ ಅಧಿಕಾರಿಗಳಿಗೆ ಪತ್ರಬರೆದಿದ್ದು, ಮೂರು ಶಾಲಾ ಬಸ್ಸುಗಳಲ್ಲಿ ಮಕ್ಕಳ ನೋಡಿಕೊಳ್ಳಲು ಸಿಬ್ಬಂದಿ ನೇಮಕ ಮಾಡದ ಹಿನ್ನೆಲೆಯಲ್ಲಿ ಶಾಲಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿ, ನೋಟೀಸ್ ಜಾರಿ ಮಾಡಿದ್ದು, ಶಾಲೆಗೆ ಬೈಕ್ನಲ್ಲಿ ಮೂರು, ನಾಲ್ಕು ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರಿಗೆ ಬುದ್ಧಿವಾದ ಹೇಳಿ ಹತ್ತು ಬೈಕ್ ಸವಾರರಿಗೆ ದಂಡ ವಿಧಿಸಿದರು. ಸೋಮವಾರ ಶಾಲಾರಂಭಕ್ಕೆ ಪೊಲೀಸರ ದಿಡೀರ್ ತಪಾಸಣೆಯಿಂದ ಶಾಲಾಡಳಿತ ಮಂಡಳಿಗಳು ಗಲಿಬಿಲಿಗೊಂಡವು.
Comments are closed.