ತುಮಕೂರು: ಫ್ಯಾಷನಿಷ್ಟ್ ಇಂಡಿಯ ಸಂಸ್ಥೆಯ ವತಿಯಿಂದ ತುಮಕೂರಿನ ಎಸ್.ಮಾಲ್ ನಲ್ಲಿ ಮುಂದಿನ ನವೆಂಬರ್ ಮಾಹೆಯಲ್ಲಿ ಶ್ರೀಲಂಕಾದಲ್ಲಿ ನಡೆಯುವ ಮಿಸಸ್ ಅಂಡ್ ಮಿಸ್ಟರ್ ಇಂಡಿಯಾ ಫ್ಯಾಷನ್ ಸ್ಪರ್ಧೆಯ ವಿನ್ನರ್, ರನ್ನರ್ಗಳ ಕ್ರೌನ್ ಬಿಡುಗಡೆ ಮಾಡಲಾಯಿತು.
2023 ರ ನವೆಂಬರ್ನಲ್ಲಿ ಆರು ದಿನಗಳ ಕಾಲ ಶ್ರೀಲಂಕಾದ ರಾಯಲ್ ಕ್ಲಾಸಿಕ್ ರೆಸಾರ್ಟ್ಸ್ ನಲ್ಲಿ ನಡೆಯುವ ಮಿಸ್ಟರ್ ಅಂಡ್ ಮಿಸಸ್ ಇಂಡಿಯಾದ ಮೊದಲ ಮೂರು ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ತೊಡಿಸುವ ಕೀರಿಟವನ್ನು ತುಮಕೂರಿನ ವಿಶ್ವಾಸ್ ಜ್ಯೂಯಲ್ಸ್ ಮಾಲೀಕ ವಿಶ್ವಾಸ್ ಮತ್ತು ಮಧುಗಿರಿ ತಾಲೂಕು ದೊಡ್ಡೇನಹಳ್ಳಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಜೆ.ಲಕ್ಷ್ಮಿ ಬಿಡುಗಡೆ ಮಾಡಿದರು.
ಈ ವೇಳೆ ಫ್ಯಾಷನಿಷ್ಟ್ ಇಂಡಿಯಾ ಸಂಸ್ಥೆಯ ಆರುಂಧತಿ ಲಾಲ್ ಮಾತನಾಡಿ, ಭಾರತೀಯ ಪುರುಷ ಮತ್ತು ಮಹಿಳೆಯರಿಗಾಗಿ ಮಿಸೆಸ್ ಅಂಡ್ ಮಿಸ್ಟರ್ ಇಂಡಿಯಾ ಸರ್ಧೆ ಆಯೋಜಿಸಲಾಗಿದೆ, ಇದೇ ಮೊದಲ ಬಾರಿಗೆ ಮೆಟ್ರೋ ಪಾಲಿಟನ್ ಸಿಟಿಯಿಂದ ಹೊರೆಗೆ ತುಮಕೂರಿನಂತಹ ನಗರದಲ್ಲಿ ಇಷ್ಟು ದೊಡ್ಡ ಮಟ್ಟದ ಸ್ಪರ್ಧೆಯ ಕ್ರೌನ್ ಬಿಡುಗಡೆ ಮಾಡುತ್ತಿದ್ದು, ಈ ಅವಕಾಶ ನಮ್ಮ ಸಂಸ್ಥೆಯಾದ ಫ್ಯಾಷನಿಷ್ಟ್ ಇಂಡಿಯಾ ಗೆ ದೊರೆತಿರುವುದು ಸಂತಸ ತಂದಿದೆ, ಕಳೆದ ಎಂಟು ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಮಿಸ್ ವರ್ಲ್ಡ್ ಟೂರಿಸಂ-2023, ಮಿಸ್ ಇಂಡಿಯಾ ಸ್ಪರ್ಧೆ ಸೇರಿದಂತೆ ಜಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕಲೆ, ಸಾಹಿತ್ಯ, ಸಂಗೀತ ಹೀಗೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿರುವ ತುಮಕೂರಿನ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನವಾಗಿದೆ ಎಂದರು.
ನವೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಯುವ ಮಿಸೆಸ್ ಅಂಡ್ ಮಿಸ್ಟರ್ ಇಂಡಿಯಾ ಸ್ಪರ್ಧೆಯ ಅಡಿಷನ್ ರಾಜ್ಯದಾದ್ಯಂತ ಶೀಘ್ರದಲ್ಲೇ ಆರಂಭವಾಗಲಿದೆ.18 ರಿಂದ 28 ವಯಸ್ಸಿನ ಪುರುಷ ಮತ್ತು ಮಹಿಳೆಯರು ಅಡಿಷನ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.
ಏಳು ಟೈಟಲ್ಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತೀಯ ಉಡುಗೆ ಅತಿ ಮುಖ್ಯವಾದ ಘಟ್ಟವಾಗಿದೆ, ಹೌಸ್ ಆಫ್ ಟ್ರಡೀಷನ್ ಸಂಸ್ಥೆ ವಸ್ತ್ರ ವಿನ್ಯಾಸಗಳನ್ನು ಕೊಡುಗೆಯಾಗಿ ನೀಡುತ್ತಿದೆ, ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾಷನ್ ಪ್ರಿಯರು ಮಿಸ್ಟರ್ ಅಂಡ್ ಮಿಸೆಸ್ ಇಂಡಿಯಾ ಸ್ಪರ್ಧೆಗೆ ತಮ್ಮ ಹೆಸರು ನೋಂದಾಯಿಸಿ ಅಡಿಷನ್ನಲ್ಲಿ ಭಾಗವಹಿಸಬೇಕೆಂದು ಅರಂಧತಿಲಾಲ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಫ್ಯಾಷನಿಷ್ಟ್ ಇಂಡಿಯಾದ ಮಿಸ್ ಇಂಡಿಯಾ ಪ್ರಜಾಕ್ತ್, ಹೇಮಾಮಾಲಿನಿ, ಮಿಸ್ಟರ್ ಕರ್ನಾಟಕ ಸುಹಾಸ್, ಲಕ್ಷ್ಮಿಕಾಂತ್, ಅನುರಾಧ, ಅರ್ಜುನ್ ಪಾಳೆಗಾರ್, ಜಯಕುಮಾರ್, ಗೌರಿ ಜಯಕುಮಾರ್, ಪೃಥ್ವಿರಾಜ್, ರೇಣುಕೇಶ್, ಉಷಾ ರಾಜೇಂದ್ರನ್ ಮತ್ತಿತರರು ಇದ್ದರು.
Comments are closed.