ಗುಬ್ಬಿ: ಅಂಧಕಾರದಿಂದ ಹೊರಬಂದು ಜಾಗೃತಿ ಮೂಡಿಸಿ ನಮ್ಮ ಸಮಾಜ ಅಭಿವೃದ್ಧಿಯತ್ತ ಸಾಗಬೇಕಾಗಿದೆ ಎಂದು ಬಸವ ಮಾಚಿ ದೇವ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ಆಯೋಜನೆ ಮಾಡಿದ್ದ ಮನೆ ಮನೆಗೆ ಮಾಚಿದೇವ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಒಂದು ತಿಂಗಳಿನಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರ ಮೂಲಕ ನಮ್ಮ ಸಮಾಜದ ಸಂಘಟನೆ, ಅಭಿವೃದ್ಧಿ ಹಾಗೂ ಬೆಳವಣಿಗೆ ದೃಷ್ಟಿಯಿಂದ ಮಾಡಲಾಗುತ್ತಿದೆ, ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ ಎಂದು ನಮ್ಮನ್ನು ಗಣನೆಗೆ ತೆಗೆದುಕೊಳ್ಳುವರಿಲ್ಲ, ಹಾಗಾಗಿ ನಾವೆಲ್ಲರೂ ಸಂಘಟಿತರಾಗಿ ಶಕ್ತಿಯುತವಾಗಿ ಬೆಲೆದಾಗ ನಮ್ಮ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ, ಹಾಗಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ನಾವು ಕೇವಲ ಬಟ್ಟೆ ಹೊಗೆದು ಸ್ವಚ್ಛ ಮಾಡುವುದು ಮಾತ್ರವಲ್ಲದೆ ಮನಸ್ಸುಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಯಾವುದೇ ಒಂದು ಸಾಧನೆ ಮಾಡುವುದಕ್ಕೆ ಗುರಿ ಹಾಗೂ ಗುರು ಇರಬೇಕು, ನಿಮ್ಮ ಸಮಾಜದ ಅಭಿವೃದ್ಧಿ ಬೆಳವಣಿಗೆ ಹಾಗೂ ಜಾಗೃತಿಗಾಗಿ ಶ್ರೀಗಳು ಹಗಲು ಇರುಳು ಕೆಲಸ ಮಾಡುತ್ತಿದ್ದಾರೆ, ಹಿಂದುಳಿದ ಸಮುದಾಯಗಳು ಮೇಲ್ಮಟ್ಟದ ಸಮುದಾಯಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಾಗಿಲ್ಲ, ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದವರ ಆಶಾಕಿರಣವಾಗಿ ಕೆಲಸ ಮಾಡುತ್ತಿದ್ದು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಆಡಳಿತ ನಡೆಸುತ್ತಿದ್ದಾರೆ, ತಾವು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿದಾಗ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯರಾದ ಮಹಾಲಕ್ಷ್ಮಿ, ಶೋಕತ್ ಅಲಿ, ಕುಮಾರ್, ಮೋಹನ್, ರೇಣುಕಪ್ಪ, ಮಂಗಳಮ್ಮ, ರಾಜಣ್ಣ, ಶ್ವೇತಾ ಜಗದೀಶ್, ಮಮತಾ ಶಿವಪ್ಪ, ಕರ್ನಾಟಕ ಕಾರ್ಯನಿರತ ಪತ್ರ ಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರೇಖಾ ನಾಗರಾಜು, ತಾಲ್ಲೂಕು ಸಂಘ ಅಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ವಾಸಣ್ಣ ಇನ್ನಿತರರು ಹಾಜರಿದ್ದರು.
Comments are closed.