ಕುಣಿಗಲ್: ವ್ಯಕ್ತಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲಿಸರು ಮೃತನ ಪತ್ನಿ, ಸಂಬಂಧೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಬಣಕಾರ ಕೊಟ್ರೇಶಿ (30) ಎನ್ನಲಾಗಿದ್ದು, ಈತ ಮೂಲತಹ ವಿಜಯಪುರ ಜಿಲ್ಲೆಯ ಪಾಪನಾಯಕರ ಹಳ್ಳಿಯವ, ಹಾಲಿ ತಾಲೂಕಿನ ಅಂಚೆಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಕಲ್ಲನಾಯನಕ ಹಳ್ಳಿಯಲ್ಲಿ ಮನೆಯೊಂದರಲ್ಲಿ ವಾಸವಿದ್ದ, ಗಾಯಿತ್ರಿ ಹಳವಂಡಿ ಎಂಬಾಕೆಯೊಂದಿಗೆ ವಿವಾಹವಾಗಿದ್ದು ಕೌಟುಂಬಿಕ ಕಾರಣಗಳಿಂದ ಆಕೆಯಿಂದ ದೂರ ಉಳಿದಿದ್ದ ಎನ್ನಲಾಗಿದೆ.
ಬುಧವಾರ ಬೆಳಗಿನ ಜಾವ ಆತನ ಮನೆಯ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ಮಂಜುನಾಥ, ಮಗನ ಸಾವಿಗೆ ಪತ್ನಿ ಗಾಯಿತ್ರಿ, ಆಕೆಯ ಸಹೋದರರಾದ ರವಿ ಹಳಂಡಿ, ಸಂಗಮೇಶ ಹಳವಂಡಿ ನೀಡಿದ ಮಾನಸಿಕ ಕಿರುಕುಳವೆ ಕಾರಣ ಎಂದು ಕುಣಿಗಲ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Comments are closed.